ಮೂಡಿಗೆರೆ- ಖಾಲಿ ಕಾಟ್ರೇಜ್‌ ಪತ್ತೆ – ಅರಣ್ಯಾಧಿಕಾರಿಗಳಿಂದ ತನಿಖೆ

ಚಿಕ್ಕಮಗಳೂರು: ಸಾರಗೋಡು-ತತ್ಕೋಳ ಮೀಸಲು ಅರಣ್ಯದ ರಸ್ತೆಯಲ್ಲಿ ಬಳಕೆಯಾದ ಬಂದೂಕಿನ ಖಾಲಿ ಕಾಟ್ರೇಜ್ ಗಳು ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮೀಸಲು ಅರಣ್ಯದ ವಗೇರ್ ನಿಂದ ಕನ್ನಗದ್ದೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ 60ಕ್ಕೂ ಅಧಿಕ ಫೈರಿಂಗ್ ಆದ ಖಾಲಿ ಕಾಟ್ರೆಜ್ ಗಳು ಕಂಡುಬಂದಿವೆ. ಇಷ್ಟೊಂದು ಪ್ರಮಾಣದಲ್ಲಿ ಒಂದೇ ಕಡೆ ಖಾಲಿ ಕಾಟ್ರೇಜ್ ಗಳು ಎಲ್ಲಿಂದ ಬಂತು ಎಂಬ ಅನುಮಾನ ಕಾಡಿದ್ದು ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಸಾರಗೋಡು ತತ್ಕೋಳ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವುಗಳ ಬೇಟೆಗೆ ಕಾಟ್ರೇಜ್ಗಳು ಬಳಕೆಯಾಗಿರುವ ಬಗ್ಗೆ ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅನಧಿಕೃತ ಬಂದೂಕುಗಳ ವಶದ ಬೆನ್ನಲ್ಲೆ ಖಾಲಿ‌ ಕಾಟ್ರೇಜ್ ಗಳು ಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here