ಮುಂಬೈ – ದಾಖಲೆ ಮಟ್ಟಕ್ಕೆ ಏರಿದ ತಾಪಮಾನ

ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಮಾ.6ರಂದು ದೇಶದಲ್ಲೇ ಗರಿಷ್ಠ 39.3 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ.

ಈ ಆಘಾತಕಾರಿ ಉಷ್ಣಾಂಶದಿಂದ ಬೆಂದ ಜನಕ್ಕೆ ಸಂಜೆಯ ವೇಳೆಗೆ ಮಳೆ, ಗುಡುಗು ಹಾಗೂ ಹಿತವಾದ ಗಾಳಿ ತಂಪೆರೆದಿದ್ದು, ಮಂಗಳವಾರ ಮಾ.7ರಂದು ತಾಪಮಾನ 35.8 ಡಿಗ್ರಿಗೆ ಇಳಿದಿತ್ತು.

ಮಾ.6ರಂದು ದೂಳುಸಹಿತ ಭಾರಿ ಗಾಳಿಯಿಂದಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನಗಳು ವಿಳಂಬವಾಗಿದ್ದವು. ಎಂಎಂಆರ್, ಗೋರೈ ಪ್ರದೇಶದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಇದು ಮುಂಬೈ ಪ್ರದೇಶದಲ್ಲಿ ಕಳೆದ 17 ವರ್ಷಗಳಲ್ಲಿ ಮೊದಲ ಆಲಿಕಲ್ಲು ಮಳೆ ಎಂದು ತಜ್ಞರು ಹೇಳಿದ್ದಾರೆ.

 ಮಾ.5 ಭಾನುವಾರ 38.1 ಡಿಗ್ರಿ ಸೆಲ್ಷಿಯಸ್ ಇದ್ದ ತಾಪಮಾನ  ಮಾ.6 ಸೋಮವಾರ  39.3 ಡಿಗ್ರಿಗೆ ಹೆಚ್ಚಿದೆ. ಪ್ರಬಲ ಪೂರ್ವಾಭಿಮುಖ ಮಾರುತ ಮತ್ತು ಸಮುದ್ರದ ಗಾಳಿ ವಿಳಂಬವಾಗಿರುವುದು ತಾಪಮಾನ ದಿಢೀರ್ ಏರಿಕೆಗೆ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಸುಷ್ಮಾ ನಾಯರ್ ವಿಶ್ಲೇಷಿಸಿದ್ದಾರೆ. ಮಾರ್ಚ್‍ನಲ್ಲಿ ಮುಂಬೈನಲ್ಲಿ ಮಳೆಯಾಗುವುದು ಅಸಹಜವಲ್ಲ. ಇದು ಮುಂಗಾರು ಪೂರ್ವ ಮಳೆ ಎಂದು ತಜ್ಞರು ಹೇಳಿದ್ದಾರೆ. ಮುಂಬೈನಲ್ಲಿ ಇದುವರೆಗಿನ ಗರಿಷ್ಠ ತಾಪಮಾನ 41.6 ಡಿಗ್ರಿ ಸೆಲ್ಷಿಯಸ್ 2011ರ ಮಾರ್ಚ್ 17ರಂದು ದಾಖಲಾಗಿತ್ತು.

 

LEAVE A REPLY

Please enter your comment!
Please enter your name here