ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಅಧಿಕೃತವಾಗಿ ಬೆಂಬಲ ಘೋಷಣೆ ಮಾಡಿದ್ದಾರೆ.
ಇಂದು ಮಂಡ್ಯದ ಸಂಸದರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ನಾಯಕತ್ವ ನಂಬಿದ್ದೇನೆ. ದೇಶ, ವಿದೇಶದಲ್ಲಿ ತಲೆ ಎತ್ತಿ ನಾನು ಭಾರತೀಯ ಎಂದು ಕರೆಸಿಕೊಳ್ಳುವ ಮಟ್ಟಕ್ಕೆ ಬಂದಿದೆ ಎಂದರು. ಹಿತೈಷಿಗಳನ್ನು ಕೇಳಿ ಈ ನಿರ್ಧಾರ ಕೈಗೊಂಡಿದ್ದೇನೆ. ಅಂಬರೀಶ್ ಇದ್ದರೂ ಇದನ್ನು ಬೆಂಬಲಿಸುತ್ತಿದ್ದರು ಎಂದು ಹೇಳಿದರು.
ಕೆಲವು ಕಾನೂನಿನ ತೊಡಕುಗಳಿದ್ದು, ಸದ್ಯಕ್ಕೆ ಬಿಜೆಪಿ ಸೇರ್ಪಡೆ ಇಲ್ಲ ಎಂದು ಸುಮಲತಾ ಅವರು ಸ್ಷಷ್ಟಪಡಿಸಿದರು.