ಹೇಳಿಕೆಯಲ್ಲಿ ಪಕ್ಷಾಂತರದ ಸುಳಿವು ನೀಡಿದ ಸೋಮಣ್ಣ

ಬೆಂಗಳೂರು: ಬಿಜೆಪಿ ಯಲ್ಲಿ ಸೂಕ್ತ ಗೌರವ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸಚಿವ ಸೋಮಣ್ಣ ಬೇಸರಗೊಂಡಿದ್ದು, ನಾನು ನಿಂತ ನೀರಲ್ಲ, ಹರಿಯುವ ನೀರು ಎಂದು ಹೇಳುವ ಮೂಲಕ ಪಕ್ಷಾoತರದ ಸುಳಿವು ನೀಡಿದ್ದಾರೆ.

ಶುಕ್ರವಾರ ಬಿಜೆಪಿ ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ಎರಡು ಪ್ರಮುಖ ಸಮಿತಿ ರಚಿಸಿದ್ದು ಅದರಲ್ಲಿ ಸೋಮಣ್ಣ ಅವರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಮೈಸೂರು ಮತ್ತು ಚಾಮರಾಜನಗರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಪಕ್ಷದ ವೇದಿಕೆಯಲ್ಲಿ ಸೋಮಣ್ಣ ಈ ಹಿಂದೆ ಆರೋಪಿಸಿದ್ದರು. ಚುನಾವಣೆ ದಿನ ನಿಗದಿಯಾದ ಬಳಿಕ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here