ಪುಣೆ :ಮಹರಾಷ್ಟ್ರದ ಪುಣೆಯಲ್ಲಿ ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆ ಮಾವನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದು ಅಘೋರಿ ಪೂಜೆಗೆ ಬಳಸಲು ಮುಟ್ಟಾದ ಸಮಯದ ರಕ್ತ ನೀಡುವಂತೆ ಒತ್ತಡ ಹೇರಿ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬೀಡ್ ನಲ್ಲಿರುವ ಮಾವನ ಮನೆಯಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಈಗ ದೂರು ಸಲ್ಲಿಸಲಾಗಿದೆ.2022ರ ಗಣೇಶ ಹಬ್ಬದ ವೇಳೆ ಈ ರೀತಿ ರಕ್ತ ನೀಡುವಂತೆ ನನ್ನನ್ನು ಬಲವಂತ ಪಡಿಸಲಾಗಿತ್ತು ಎಂದು 27ರ ಹರೆಯದ ಮಹಿಳೆ ಆರೋಪಿಸಿದ್ದಾಳೆ. ಈಗ ಮಹಿಳೆ ಪುಣೆಯಲ್ಲಿರುವ ಪೋಷಕರ ಜೊತೆ ವಾಸವಾಗಿದ್ದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.