ಮಂಗಳೂರು : ಪೊಲೀಸನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಮಸಾಜ್ ಪಾರ್ಲರ್ ನಡೆಸುತ್ತಿದ್ದ ಮಹಿಳೆಯೊರ್ವರಿಂದ ಸಾವರಾರು ರೂಪಾಯಿ ಸುಲಿಗೆ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅನುಮತಿ ರಹಿತ ಮಸಾಜ್ ಪಾರ್ಲರ್ ನಡೆಸುತ್ತಿದ್ದ ಮಹಿಳೆಯ ಮನೆಗೆ ಪೊಲೀಸ್ ಸಮವಸ್ತ್ರ ಧರಿಸಿ ಬಂದ ವ್ಯಕ್ತಿಯೊಬ್ಬ ತನ್ನನ್ನು ಪಾಂಡೇಶ್ವರ ಪೊಲೀಸ್ ಠಾಣೆ ಸಿಬ್ಬಂಧಿ ಎಂದು ಪರಿಚಯಿಸಿಕೊಂಡಿದ್ದ. ನೀವು ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದೀರಿ ಇದು ನಮ್ಮ ಸಾಹೇಬರಿಗೆ ತಿಳಿದಿದೆ ಅವರ ಜೊತೆ ಸಹಕರಿಸಿದರೆ ನಿಮ್ಮ ದಂಧೆಗೆ ತೊಂದರೆಯಾಗುವುದಿಲ್ಲ, ರೈಡ್ ನಡೆಯುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಹೆದರಿದ ಮಹಿಳೆ ಸಾಹೇಬರಿಗೆಂದು 18000 ರೂ. ಗೂಗಲ್ ಪೇ ಮೂಲಕ ವರ್ಗಾಯಿಸಿದ್ದಾರೆ. ಇದಾದ ಬಳಿಕ ಇದೇ ನಕಲಿ ಪೊಲೀಸ್ ಮಹಿಳೆಗೆ ಕರೆ ಮಾಡಿ ನಿಮ್ಮ ಫೈಲ್ ಆಯುಕ್ತರ ಕಛೇರಿಗೆ ತಲುಪಿದೆ, ಮುಚ್ಚಿ ಹಾಕಲು ಹಣ ನೀಡಬೇಕು ಇಲ್ಲವಾದಲ್ಲಿ ಆಯುಕ್ತರು ಮನೆಗೆ ರೈಡ್ ಮಾಡಲಿದ್ದಾರೆ ಎಂದು ಬೆದರಿಕೆ ಹಾಕಿದ್ದಾನೆ. ಮಹಿಳೆ ಮತ್ತೇ 20000ರೂ ಅನ್ನು ಗೂಗಲ್ ಪೇ ಮಾಡುವ ಮೂಲಕ ಆ ವ್ಯಕ್ತಿಗೆ ವರ್ಗಾಯಿಸಿದ್ದಾರೆ. ಮನೆಗೆ ಬಂದ ಪೊಲೀಸ್ ನಕಲಿ ಎಂದು ತಿಳಿಯುವಷ್ಟರಲ್ಲಿ ಮಹಿಳೆ 38000 ರೂ ಕಳೆದುಕೊಂಡಿದ್ದಾರೆ.
ಅಪ್ಡೇಟ್ :
ಮೇಲಿನ ಘಟನೆಗೆ ಸಂಬಂಧಿಸಿದಂತೆ ಪಾರ್ಲರ್ ನಡೆಸುತ್ತಿದ್ದ ಮಹಿಳೆ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ತನಿಖೆ ಕೈಗೊಂಡ ಪೊಲೀಸರು ಇದೇ ಪ್ರದೇಶದ ಈಶ್ವರ ನಗರ ನಿವಾಸಿ ಶಿವರಾಜ್ ದೇವಾಡಿಗ ಎಂಬಾತನನ್ನು ಬಂಧಿಸಿದ್ದಾರೆ.