ಶಾದೋಲ್: ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಆರೋಪಿಯ ‘ಅಕ್ರಮ’ ಮನೆಯನ್ನು ನೆಲಸಮಗೊಳಿಸುವ ಕಾರ್ಯಾಚರಣೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳೇ ಪಾಲ್ಗೊಂಡಿದ್ದ ಘಟನೆ ರಾಜಧಾನಿ ಭೋಪಾಲ್ನಿಂದ 250 ಕಿಮೀ ದೂರವಿರುವ ಶಾದೋಲ್ ಜಿಲ್ಲೆಯಲ್ಲಿ ನಡೆದಿದೆ. ನೆಲಸಮ ಕಾರ್ಯಾಚರಣೆ ಸಂದರ್ಭದಲ್ಲಿ ಹಲವು ಮಹಿಳಾ ಪೊಲೀಸರು ಬುಲ್ಡೋಜರ್ ಏರಿ ಕುಳಿತಿದ್ದರು.
ಬಾಲಕಿಯೊಬ್ಬಳ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಆರೋಪಿಗಳ ಪೈಕಿ ಒಬ್ಬನಾದ ಕೌಶಲ್ ಕಿಶೋರ್ ಚೌಬೆಗೆ ಸೇರಿದ್ದೆನ್ನಲಾದ ಅಕ್ರಮ ಕಟ್ಟಡವನ್ನು ಮಹಿಳಾ ಪೊಲೀಸ್ ಸಿಬ್ಬಂದಿಗಳು ಬುಲ್ಡೋಜರ್ ನೆರವಿನಿಂದ ನೆಲಸಮಗೊಳಿಸಿದರು. ಆರೋಪಿ ಚೌಬೆ ಈ ಕಟ್ಟಡವನ್ನು ಸರ್ಕಾರಿ ಜಾಗವನ್ನು ಅತಿಕ್ರಮಿಸಿ ನಿರ್ಮಿಸಿದ್ದ ಎಂದು ಆರೋಪಿಸಲಾಗಿದೆ.