ಹೋಳಿ ಆಚರಣೆ ವೇಳೆ ಜಪಾನ್‌ ಯುವತಿಗೆ ಕಿರುಕುಳ

ಹೊಸದಿಲ್ಲಿ: ಹೊಸದಿಲ್ಲಿಯಲ್ಲಿ ಬುಧವಾರ ಹೋಳಿ ಹಬ್ಬ ಆಚರಣೆ ಸಂದರ್ಭ ಜಪಾನ್ ಯುವತಿಯೋರ್ವಳಿಗೆ ಯುವಕರ ಗುಂಪೊಂದು ಕಿರುಕುಳ ನೀಡಿದ ಘಟನೆ ನಡೆದಿದೆ.

 

ಘಟನೆಯ ಕುರಿತ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಹಲವರು ಆಗ್ರಹಿಸಿದ್ದಾರೆ. ಭಾರತಕ್ಕೆ ಪ್ರವಾಸಿಯಾಗಿ ಬಂದಿದ್ದ ಈ ಯುವತಿ ಘಟನೆಯ ಬಳಿಕ ಭಾರತ ತೊರೆದು ಬಾಂಗ್ಲಾದೇಶಕ್ಕೆ ತೆರಳಿದ್ದಾರೆ. ಇನ್ನೊಂದೆಡೆ ಯುವತಿ ಜತೆ ಅನುಚಿತ ವರ್ತನೆ ತೋರಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.   

LEAVE A REPLY

Please enter your comment!
Please enter your name here