ಬಾವಿಯಲ್ಲಿ ಹತ್ತು ವರ್ಷದ ಬಾಲಕನ ಮೃತ ದೇಹ ಪತ್ತೆ

ಕಾಸರಗೋಡು: ಹತ್ತು ವರ್ಷದ ಬಾಲಕನೋರ್ವ ಬಾವಿಯಲ್ಲಿ ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪನತ್ತಡಿ ಸಮೀಪದ ಚಾಮುಂಡಿ ಕುನ್ನು ಎಂಬಲ್ಲಿ ನಡೆದಿದೆ.

ಇಲ್ಲಿನ ಪ್ರಭಾಕರ ಎಂಬವರ ಪುತ್ರ ಅರ್ಜುನ್(10) ಮೃತ ಪಟ್ಟ ಬಾಲಕ. ಪನತ್ತಡಿ ಶಾಲೆಯಲ್ಲಿ 5 ನೇ ತರಗತಿ ವಿದ್ಯಾರ್ಥಿಯಾಗಿದ್ದು ರಾತ್ರಿ ಧಿಡೀರನೆ ನಾಪತ್ತೆಯಾಗಿದ್ದ ಬಾಲಕನನ್ನು ಮನೆಯವರು ಮತ್ತು ಪರಿಸರ ನಿವಾಸಿಗಳು ಹುಡುಕುವ ವೇಳೆ ಸಮೀಪದ ಅವರಣವಿಲ್ಲದ ಬಾವಿಯಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಮೇಲೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬಾಲಕ ಅದಾಗಲೇ ಮೃತ ಪಟ್ಟಿದ್ದ.

LEAVE A REPLY

Please enter your comment!
Please enter your name here