ಭೂಮಿಗೆ ಸುನಿತಾ ಕರೆತರಲು ನಾಸಾ, ಸ್ಪೇಸ್‌ಎಕ್ಸ್ ಕಾರ್ಯಾಚರಣೆಗೆ ಚಾಲನೆ

ವಾಷಿಂಗ್ಟನ್/ಮಂಗಳೂರು: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಸಿಲುಕಿಕೊಂಡಿರುವ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ವಾಪಸ್‌ ಕರೆತರಲು ಸ್ಪೇಸ್‌ಎಕ್ಸ್ ನೆರವಿನೊಂದಿಗೆ ನಾಸಾ ಕಾರ್ಯಾಚರಣೆ ಆರಂಭಿಸಿದೆ.

ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಮಾ.14ರ ಶುಕ್ರವಾರ ಸಂಜೆ ಸ್ಥಳೀಯ ಕಾಲಮಾನ 7.03ಕ್ಕೆ ಸರಿಯಾಗಿ ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್ ಆಗಸದತ್ತ ಚಿಮ್ಮಿದೆ. ಈ ಸಂಬಂಧ ನಾಸಾ ಹಾಗೂ ಸ್ಪೇಸ್‌ಎಕ್ಸ್ ಮಾಹಿತಿ ಹಾಗೂ ವಿಡಿಯೊವನ್ನು ಹಂಚಿಕೊಂಡಿದೆ.

ಈ ಮಿಷನ್‌ನಲ್ಲಿ ನಾಲ್ವರು ಗಗನಯಾನಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗಿದೆ. ಈ ಮೊದಲು ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಉಡ್ಡಯನ ವಿಳಂಬಗೊಂಡಿತ್ತು.

ಕಳೆದ ವರ್ಷ ಜೂನ್‌ 5ರಂದು, ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ ಗಗನನೌಕೆಯಲ್ಲಿ ಸುನಿತಾ ಹಾಗೂ ವಿಲ್ಮೋರ್‌ ಅವರು ಐಎಸ್‌ಎಸ್‌ನತ್ತ ಪ್ರಯಾಣ ಬೆಳೆಸಿದ್ದರು. 8 ದಿನಗಳ ನಂತರ ಅವರು ಭೂಮಿಗೆ ಮರಳಬೇಕಿತ್ತು. ಆದರೆ, ಗಗನನೌಕೆಯಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದಾಗಿ ಭೂಮಿಗೆ ಮರಳಲು ಸಾಧ್ಯವಾಗಿರಲಿಲ್ಲ. ಎಲ್ಲವೂ ನಿರೀಕ್ಷಿಸಿದಂತೆ ನಡೆದರೆ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್‌ ಮಾ.19ರೊಳಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಲಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

https://twitter.com/i/broadcasts/1BRJjmOebzLGw

https://x.com/NASA/status/1900706105409376403?ref_src=twsrc%5Etfw%7Ctwcamp%5Etweetembed%7Ctwterm%5E1900706105409376403%7Ctwgr%5Ef460f7502b92240b6bfaf83d5bf82e323a3d44e6%7Ctwcon%5Es1_c10&ref_url=https%3A%2F%2Fwww.prajavani.net%2Ftechnology%2Fscience%2Fnasa-spacex-launches-crew-10-mission-to-the-iss-to-bring-back-sunita-williams-butch-wilmore-from-iss-3206984

 

 

 

LEAVE A REPLY

Please enter your comment!
Please enter your name here