ಡ್ರಮ್ ನಲ್ಲಿ ಶವ – ರಹಸ್ಯ ಬೇಧಿಸಿದ ರೈಲ್ವೆ ಪೊಲೀಸ್

ಮಂಗಳೂರು : ಬೆಂಗಳೂರಿನ ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಬಳಿ ಡ್ರಮ್ಮೊoದರಲ್ಲಿ ಮಹಿಳೆಯೊಬ್ಬರ ಮೃತ ದೇಹ ಪತ್ತೆಯಾದ ಪ್ರಕರಣದ ರಹಸ್ಯವನ್ನು ಭೇದಿಸಿರುವ ರೈಲ್ವೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಯಾದ ಮಹಿಳೆಯನ್ನು ಬಿಹಾರ ಮೂಲದ ತಮನ್ನಾ (27) ಎಂದು ಗುರುತಿಸಲಾಗಿದೆ. ಕೊಲೆ ಪ್ರಕರಣದಲ್ಲಿ ಒಟ್ಟು ಎಂಟು ಮಂದಿ ಬಾಗವಹಿಸಿದ್ದು ಸಿಟಿ ಮಾರ್ಕೆಟ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಬಿಹಾರ್ ಮೂಲದ ಕಮಾಲ್ (21), ತನ್ವಿರ್ (24), ಮತ್ತು ಶಕೀಬ್ (25) ಎಂಬವರನ್ನು ಬಂಧಿಸಲಾಗಿದ್ದು ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ರೈಲ್ವೆ ಪೊಲೀಸ್ ವರಿಷ್ಟಾಧಿಕಾರಿ ಡಾ. ಸೌಮ್ಯಲತಾ ತಿಳಿಸಿದ್ದಾರೆ. ಕೊಲೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವವರ ಪೈಕಿ ನವಾಬ್ ಮತ್ತು ಇಂತಿಖಾಬ್ ಸಹೋದರರಾಗಿದ್ದು ಪತಿಯನ್ನು ತೊರೆದಿದ್ದ ತಮನ್ನಾ ಇಂತಿಖಾಬ್ ನನ್ನು ಪುಲಾಯಿಸಿ ಮದುವೆಯಾಗಿದ್ದಳು. ಇದು ಸಹೋದರರ ನಡುವೆ ವೈಮನಸ್ಸಿಗೆ ಕಾರಣವಾಗಿತ್ತು. ಇದಕ್ಕೆಲ್ಲ ಕಾರಣ ತಮನ್ನಾ ಎಂದು ಆಕ್ರೋಶಗೊಂಡ ನವಾಬ್ ಆಕೆಯನ್ನು ಊಟಕ್ಕೆ ಕರೆದು ಶಾಲಿನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಶವವನ್ನು ಡ್ರಮ್ ನಲ್ಲಿ ಹಾಕಿ ಬಿಹಾರಕ್ಕೆ ಸಾಗಿಸಲು ರೈಲು ನಿಲ್ದಾಣಕ್ಕೆ ತಂದಿಟ್ಟಿದ್ದರು. ಆದರೆ ಸಾಗಿಸಲು ಸಾಧ್ಯವಾಗದೆ ಅಲ್ಲೇ ಬಿಟ್ಟು ಹೋಗಿದ್ದರು. ರೈಲು ನಿಲ್ದಾಣದ ಸಿ ಸಿ ಟಿವಿ ದೃಶ್ಯಾವಳಿ ಆಧರಿಸಿ ಮೂರು ತಂಡ ರಚಿಸಿ ತನಿಖೆ ಆರಂಭಿಸಿದ ಪೊಲೀಸರು ಕೊನೆಗೂ ಕೊಲೆ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here