ಮಂಗಳೂರು : ಮಾರ್ಚ್ 8 ರಂದು ದಿಲ್ಲಿ – ಗುವಾಹಟಿ ನಡುವೆ 37 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಸ್ಪೈಸ್ ಜೆಟ್ ವಿಮಾನದ ಕಾಕ್ ಪಿಟ್ ನಲ್ಲಿ ಚಹಾ ಮತ್ತು ಸಿಹಿ ತಿಂಡಿಯನ್ನು ಅಪಾಯಕಾರಿ ಸ್ಥಿತಿಯಲ್ಲಿಟ್ಟು ಸೇವಿಸಿದ್ದಾರೆನ್ನಲಾದ ಇಬ್ಬರು ಪೈಲಟ್ ನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ನಾಗರಿಕ ವಿಮಾನ ಯಾನ ನಿರ್ದೇಶನಾಲಯ ಸ್ಪೈಸ್ ಜೆಟ್ ಸಂಸ್ಥೆಗೆ ಎಚ್ಚರಿಕೆ ನೀಡಿದ್ದು ತನಿಖೆಯ ನಂತರ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸ್ಪೈಸ್ ಜೆಟ್ ಆಡಳಿತ ತಿಳಿಸಿದೆ. ಒಂದು ತೊಟ್ಟು ನೀರು ಬಿದ್ದರೂ ವಿಮಾನದ ಯಂತ್ರಗಳಿಗೆ ಹಾನಿ ಸಂಭವಿಸಿ ದುರಂತಕ್ಕೆ ಕಾರಣವಾಗಬಹುದೆಂದು ಕಾಕ್ ಪಿಟ್ ನಲ್ಲಿ ಆಹಾರ ಸೇವನೆಗೆ ನಿಬಂದನೆಗಳಿವೆ.