ಮಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದ ಕೆ ಪಿ ಟಿ ಸಿ ಎಲ್ ಶೇ 20 ರಷ್ಟು ವೇತನ ಹೆಚ್ಚು ಮಾಡುವ ಭರವಸೆ ಮುಖ್ಯ ಮಂತ್ರಿಗಳಿಂದ ಸಿಗುತ್ತಲೇ ಮುಷ್ಕರದಿಂದ ಹಿಂದೆ ಸರಿದಿದೆ. ಬೆಂಗಳೂರು ನಗರದೊಳಗೆ 7.5 ಟನ್ ಸರಕು ವಾಹನದ ಸಂಚಾರಕ್ಕೆ ಅನುಮತಿ ನೀಡುವ ಭರವಸೆ ಹಿನ್ನಲೆಯಲ್ಲಿ ಲಾರಿ ಮಾಲಕರ ಸಂಘವು ಮುಷ್ಕರ ಹಿಂಪಡೆದಿದೆ. ಆದರೆ ರಾಜ್ಯ ಸಾರಿಗೆ ಇಲಾಖೆ ಶೇ 25 ರಷ್ಟು ವೇತನ ಪರಿಷ್ಕರಣೆ , ಇನ್ಸೆಂಟಿವ್, ಭತ್ತೆ ಹೆಚ್ಚಳ, ವಜಾಗೊಂಡ ಸಿಬ್ಬಂದಿಗಳ ನೇಮಕ ಸೇರಿದಂತೆ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಷ್ಕರ ವಾಪಸ್ ಪಡೆಯುವುದಿಲ್ಲ ಎಂದು ಸಾರಿಗೆ ನೌಕರರ ಸಂಘದ ಅಧ್ಯಕ್ಷ ಎಚ್ ವಿ ಸುಬ್ಬರಾವ್ ಹೇಳಿದ್ದಾರೆ. ಶೇ 15 ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಸಿಎಂ ತಿಳಿಸಿದ್ದು ನಮಗೆ ಮಾಧ್ಯಮದ ಮೂಲಕ ತಿಳಿದಿದೆ,ಆದೇಶ ಇನ್ನೂ ಬಂದಿಲ್ಲ. ಮಾ 17 ರಂದು ನಡೆಯುವ ಸಂಘದ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.