ಮಂಗಳೂರು: ಪುಲ್ವಾರಿ ಶರೀಫ್ ಪ್ರಕರಣದಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಆರೋಪದಡಿ ಬಂಧಿತರಾಗಿರುವವರು ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆಗೈದ ಆರೋಪಿಗಳಿಗೂ ಹಣ ಸಂದಾಯ ಮಾಡಿರುವುದು ಬೆಳಕಿಗೆ ಬಂದಿದೆ.
ಕಳೆದ 2022 ಜುಲೈನಲ್ಲಿ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಪುಲ್ವಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ಇತ್ತೀಚಿಗೆ ಪುತ್ತೂರು, ಮತ್ತು ಬಂಟ್ವಾಳ ಮೆಲ್ಕಾರ್ ನಿಂದ ಒಟ್ಟು ಐದು ಮಂದಿಯನ್ನು ಬಂದಿಸಿದ್ದು ಪ್ರವೀಣ್ ನೆಟ್ಟಾರು ಹಂತಕರಿಗೆ ಇವರು ಹಣಕಾಸು ನೆರವು ನೀಡಿರುವುದು ತನಿಖೆ ವೇಳೆ ತಿಳಿದು ಬಂದಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಆರೋಪದಡಿ ಬಂಧಿತನಾಗಿರುವ ಅಂಕ್ಕತಡ್ಕ ನಿವಾಸಿ ರಿಯಾಜ್ ಎಂಬಾತನ ಮನೆಯಲ್ಲಿದ್ದ ಮೊಬೈಲನ್ನು ಪರಿಶೀಲನೆ ನಡೆಸಿದ ಸಂಧರ್ಭದಲ್ಲಿ ಆತನ ಖಾತೆಗೆ ಹಣ ಸಂದಾಯವಾಗಿರುವುದು ಕಂಡು ಬಂದಿದೆ. ಎನ್ ಐ ಎ ತನಿಖೆ ಮುಂದುವರಿದಿದೆ.