ಹೆತ್ತಮ್ಮನನ್ನು ಹತ್ಯೆ ಮಾಡಿ ತುಂಡರಿಸಿ ಸುತ್ತಿಟ್ಟ ಮಹಾ ಮಗಳು

ಮಂಗಳೂರು: ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ ಪುತ್ರಿಯೊಬ್ಬಳು ಅಮ್ಮನ ಮೃತ ದೇಹವನ್ನು ತುಂಡು ತುಂಡು ಮಾಡಿ ಪ್ಲಾಸ್ಟಿಕ್ ನಲ್ಲಿ ಸುತ್ತಿ ಮನೆಯಲ್ಲಿಟ್ಟು, ಮೂರು ತಿಂಗಳು ಅದರೊಂದಿಗೆ ಕಳೆದ ಘಟನೆ ಮುಂಬೈ ಲಾಲ್ ಭಾಗ್ ಪ್ರದೇಶದ ಕಾಲಾ ಚೌಕಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಕಾರಣದ ಆರೋಪಿ ಮಗಳು ರಿಂಪಲ್ ಜೈನ್ (25) ತನ್ನ ಹೆತ್ತ ತಾಯಿ ವೀಣಾ (53) ಎಂಬವರನ್ನು ಹತ್ಯೆ ಮಾಡಿದ ಬಳಿಕ ಮೃತ ದೇಹವನ್ನು ತುಂಡರಿಸಿ ಪ್ಲಾಸ್ಟಿಕ್ ನಲ್ಲಿ ಸುತ್ತಿ ಬಚ್ಚಲು ಕೊನೆಯಲ್ಲಿ ಇರಿಸಿದ್ದಳು. ಸಂಬಂಧಿಕರು ಮತ್ತು ನೆರೆಹೊರೆಯವರು ಕೇಳಿದಾಗ ಅಮ್ಮ ಕಾನ್ಪುರಕ್ಕೆ ಹೋಗಿರುವುದಾಗಿ ಹೇಳುತ್ತಿದ್ದ ರಿಂಪಲ್ ಶವ ಕೊಳೆತು ವಾಸನೆ ಬಾರದಿರಲು ಸುಮಾರು 200 ಬಾಟಲಿ ಸುಗಂಧ ದ್ರವ್ಯವನ್ನು ಮತ್ತು ರೂಮ್ ಫ್ರೆಶ್ನರ್ ಬಳಸಿದ್ದಳು. ಅಮ್ಮ ಕಾಣೆಯಾದ ಬಗ್ಗೆ ಸಂಶಯಗೊಂಡ ಸಹೋದರ ಮತ್ತು ಸೋದರಳಿಯ ಕಾಲಾ ಚೌಕಿ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸುತ್ತಾರೆ. ಅಪಾರ್ಟ್ ಮೆಂಟ್ ನಲ್ಲಿ ಹುಡುಕಾಟ ನಡೆಸಿದಾಗ ಮೊದಲ ಮಹಡಿಯಲ್ಲಿ ಪ್ಲಾಸ್ಟಿಕ್ ನಲ್ಲಿ ಸುತ್ತಿಟ್ಟ ಕತ್ತರಿಸಿದ ಕೊಳೆತ ಶವ ಪತ್ತೆಯಾಗಿದೆ. ಪೊಲೀಸರು ಮಗಳು ರಿoಪಲ್ ಜೈನ್ ಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸಾವಿಗೆ, ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಶವವನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

LEAVE A REPLY

Please enter your comment!
Please enter your name here