ಮಂಗಳೂರು: ಕೊಲೆಯಾದ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಉಲ್ಲಾಳ ಕೋಟೆಪುರದ ಮನೆಯೊಂದರ shauchaalaya ದಲ್ಲಿ ಪತ್ತೆಯಾಗಿದೆ. 45 ವರ್ಷದ ಮೃತ ಮಹಿಳೆ ದೆಹಲಿ ಮೂಲದವರಾಗಿದ್ದು ಮಹಿಳೆಯ ಜತೆಗಿದ್ದ ಅದೇ ಊರಿನ ನಯೀಮ್ (35) ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಉಳ್ಳಾಲ ಪೊಲೀಸರು ತಿಳಿಸಿದ್ದಾರೆ. ಮೂರು ದಿನದ ಹಿಂದೆ ಇಲ್ಲಿಗೆ ಬಂದಿದ್ದ ಇವರು ಸ್ಥಳೀಯ ಸಲೂನ್ ನವರ ಪರಿಚಯ ಮಾಡಿಕೊಂಡು ಅವರ ಮೂಲಕ ಬಾಡಿಗೆ ಮನೆ ಪಡೆದಿದ್ದು ಬಟ್ಟೆ ವ್ಯಾಪಾರ ಮಾಡುವವರು ಎಂದು ಹೇಳಿದ್ದರು. ಮಾ. 16 ರಂದು ಸಂಜೆ ವರೆಗೂ ಮನೆಯಿಂದ ಯಾರೂ ಹೊರಗೆ ಬಾರದೆ ಇರುವುದನ್ನು ಗಮನಿಸಿದ ಸ್ಥಳೀಯರು ಪರಿಶೀಲಿಸಿದಾಗ shauchalaya ದಲ್ಲಿ ಚೂರಿಯಿಂದ ಇರಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ಉಳ್ಳಾಲ ಪೊಲೀಸ್ ಮತ್ತು ವಿಧಿ ವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದೆ.