ಮಂಗಳೂರು: ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ಹೈವೇ ಯೋಜನೆಗೆ ಖರ್ಚಾಗಿದ್ದು ಬರೋಬ್ಬರಿ 9,500 ಕೋಟಿ. 140 ಕಿ.ಮೀ ಯೋಜನೆಯಲ್ಲಿ 70 ಕಿ.ಮೀ ಕಾಮಗಾರಿ ಪೂರ್ತಿಯಾಗಿದ್ದು, ಅವೈಜ್ಞಾನಿಕತೆ ಮತ್ತು ಗುಣಮಟ್ಟ ಇಲ್ಲದೆ ಇರುವುದು ಈಗ ಸಾಬೀತಾಗಿದೆ.
ಕಳೆದ ರಾತ್ರಿ ರಾಮನಗರದಲ್ಲಿ ಮಳೆಯಾಗಿದ್ದು ಹೈವೇ ಕೆರೆಯಂತಾಗಿದೆ. ದಶಪಥವೆಂದು ಹೇಳಲಾಗುತ್ತಿರುವ ಆರು ಪಥದ ಹೆದ್ದಾರಿಯಲ್ಲಿ ಮಳೆ ಅವಾಂತರದಿಂದ ಸಂಗಬಸವನದೊಡ್ಡಿ ಬಳಿ ಹೆದ್ದಾರಿ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕೆಲವು ವಾಹನಗಳು ಮಳೆ ನೀರಿನಲ್ಲಿ ಕೆಟ್ಟು ನಿಂತಿದ್ದಲ್ಲದೆ, ಅಪಘಾತವೂ ಸಂಭವಿಸಿದೆ. ವಾಹನ ಸವಾರರು ಹೆದ್ದಾರಿ ಪ್ರಾಧಿಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು ದುಬಾರಿ ಟೋಲ್ ಕಟ್ಟಿದರೂ ಸರಿಯಾದ ವ್ಯವಸ್ಥೆಯಿಲ್ಲವೆಂದು ಕಿಡಿಕಾರಿದ್ದಾರೆ.