ಮಂಗಳೂರು: ಹೋಟೆಲೊಂದರಲ್ಲಿ ಆಯೋಜಿಸಲಾಗಿದ್ದ ಲೇಟ್ ನೈಟ್ ಲೇಡೀಸ್ ಪಾರ್ಟಿಗೆ ಬಜರಂಗ ದಳದ ಕಾರ್ಯಕರ್ತರು ತಡೆಯೊಡ್ಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕುವೆಂಪು ರಸ್ತೆಯ ಹೋಟೆಲೊಂದರಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು.
ಮಹಿಳೆಯರ ಲೇಟ ನೈಟ್ ಪಾರ್ಟಿ ನಡೆಯುವ ಬಗ್ಗೆ ವಾರದ ಹಿಂದೆಯೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕ್ಷೇಪದ ನಡುವೆ ಪಾರ್ಟಿ ಆಯೋಜಿಸಲಾಗಿದೆ, ನಾವು ಪೊಲೀಸರೊಂದಿಗೆ ಹೋಗಿ ಪಾರ್ಟಿಯನ್ನು ನಿಲ್ಲಿಸಿದ್ದೇವೆ, ಅಲ್ಲಿ ಪಬ್ ನ ವಾತಾವರಣವಿತ್ತು ಎಂದು ಬಜರಂಗದಳದ ಮುಖಂಡ ರಾಜೇಶ್ ಗೌಡ ಹೇಳಿದ್ದಾರೆ. ಪಾರ್ಟಿಗೆ ಆಕ್ಷೇಪ ವ್ಯಕ್ತವಾಗುತ್ತಲೇ ಅಲ್ಲಿ ಸೇರಿದ್ದ ಮಹಿಳೆಯರು, ಪುರುಷರು ಮತ್ತು ಮಕ್ಕಳು ಹೋಟೆಲ್ ನಿಂದ ಹೊರ ನಡೆದಿದ್ದಾರೆ. ಪಾರ್ಟಿ ನಿಲ್ಲಿಸಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ