ರೋಮ್‌ ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೋ………….. ಎಂಬಂತೆ………..

ಮಂಗಳೂರು: ಅದ್ಯಾವುದೋ ಕಾರಣಕ್ಕೆ ಪಕ್ಕದ ಕಟ್ಟಡ ಹೊತ್ತಿ ಉರಿಯುತ್ತಿದ್ದರೂ ಹೋಟೆಲೊಂದರಲ್ಲಿ ಗ್ರಾಹಕರು ಶಾಂತ ಚಿತ್ತದಲ್ಲಿ ಆಹಾರ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ವಿಡಿಯೋವನ್ನು ಪ್ಯಾರಿಸ್‌ನ ರೆಸ್ಟಾರೆಂಟ್‌ ಒಂದರಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.

ಇದನ್ನು ಪಾವೆಲ್‌ ವಾರ್ಗನ್‌ ಎಂಬವರು ಟ್ವೀಟ್‌ ಮಾಡಿದ್ದು, ‘ದಿಸ್‌ ಇಸ್‌ ಫೈನ್‌’ (ಇದು ಚೆನ್ನಾಗಿದೆ) ಮೀಮ್‌ ಅನ್ನು ಫ್ರೆಂಚ್‌ ನಿಜ ಬದುಕಿನಲ್ಲಿ ಮಾಡಿ ತೋರಿಸಿದೆ ಎಂದು ಅವರು ಬರೆದಿದ್ದಾರೆ. ಕಾರ್ಟೂನ್‌ ನಾಯಿಯೊಂದು ಉರಿಯುತ್ತಿರುವ ಮನೆಯಲ್ಲಿ ಕುಳಿತು ʼದಿಸ್‌ ಇಸ್‌ ಫೈನ್‌ʼ ಎಂದು ಹೇಳುವ ಮೀಮ್‌ ಜನಪ್ರಿಯವಾಗಿದ್ದು, ಪಾವೆಲ್‌ ಅದನ್ನು ತಮ್ಮ ಟ್ವೀಟ್‌ ನಲ್ಲಿ ಉಲ್ಲೇಖಿಸಿದ್ದಾರೆ.

 

 

LEAVE A REPLY

Please enter your comment!
Please enter your name here