ಮಂಗಳೂರು: ಬಜಪೆ ಠಾಣೆಯಲ್ಲಿ ದಾಖಲಾದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ಹಲವಾರು ಬಾರಿ ವಿಳಾಸ ಬದಲಿಸಿ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ಜಬ್ಬಾರ್ ಯಾನೆ ಪೈರೋಜ್ ನನ್ನು ಬಜಪೆ ಠಾಣಾ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿ ಬಂಟ್ವಾಳದಲ್ಲಿ ಬಂಧಿಸಿದ್ದಾರೆ. ಈತನ ಮೇಲೆ ಪಾಂಡೇಶ್ವರ, ಉಳ್ಳಾಲ, ಮಂಗಳೂರು ನಗರ, ಎಸ್.ಸಿ.ಪಿ.ಎಸ್, ಬರ್ಕೆ ಠಾಣೆಗಳಲ್ಲಿ ಕೊಲೆಯತ್ನ, ಕಳವು, ಗಾಂಜಾ ಪ್ರಕರಣಗಳು ದಾಖಲಾಗಿರುತ್ತದೆ.
ಆರೋಪಿಯು ಹಲವಾರು ಕಡೆಗಳಲ್ಲಿ ವಿಳಾಸ ಬದಲಿಸಿ ವಾಸ ಮಾಡುತ್ತಿದ್ದು, ಬಂಧನಕ್ಕಾಗಿ ಬಲೆ ಬೀಸಿದ ಬಜಪೆ ಪೊಲೀಸರು ಈತನನ್ನು ಖೆಡ್ಡಕ್ಕೆ ಕೆಡವುವಲ್ಲಿ ಯಶಸ್ವಿಯಾಗಿರುತ್ತಾರೆ.