ಮಂಗಳೂರು: ಮಾ.25ರಂದು ದಾವಣಗೆರೆಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಎಸಗಿರುವ ಬಗ್ಗೆ ವರದಿಯಾಗಿದೆ. ಮೂಲಗಳ ಪ್ರಕಾರ, ಕೊಪ್ಪಳ ಮೂಲದ ಯುವಕನೋರ್ವ ಪ್ರಧಾನಿ ಬೆಂಗಾವಲು ಪಡೆಯತ್ತ ಧಾವಿಸಿದ್ದಾನೆ ಎಂದು ವರದಿಗಳು ತಿಳಿಸಿವೆ.
ಇದಕ್ಕೂ ಮುನ್ನ ಜಿಎಂಐಟಿ ಕಾಲೇಜಿನ ಆವರಣದಲ್ಲಿ ವ್ಯಕ್ತಿಯು ಅಡಗಿ ಕುಳಿತುಕೊಂಡಿದ್ದ ಎನ್ನಲಾಗಿದೆ. ಪ್ರಧಾನ ಮಂತ್ರಿಯವರೊಂದಿಗಿದ್ದ ವಿಶೇಷ ರಕ್ಷಣಾ ಪಡೆ ಯುವಕನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದೆ ಎಂದು ಮೂಲಗಳು ತಿಳಿಸಿವೆ.
UPDATE: ಪ್ರಧಾನಿ ರೋಡ್ ಶೋ ವೇಳೆ ಯಾವುದೇ ಭದ್ರತಾ ಲೋಪ ಆಗಿಲ್ಲ. ಅದೊಂದು ವಿಫಲ ಪ್ರಯತ್ನವಾಗಿತ್ತು.ಮೋದಿಯವರ ವಾಹನದಿಂದ ಬಹಳ ದೂರದಲ್ಲೇ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
A man tried to breach security barricade of @PMOIndia during his road show event in #Davangere. This is the second such event after #Hubballi. He was caught mid way by cops. More investigations underway. #Karnataka #KarnatakaElection2023 pic.twitter.com/nTbMHfAMUx
— Imran Khan (@KeypadGuerilla) March 25, 2023