ಮಂಗಳೂರು: ಬ್ರಿಟನ್ ಮೂಲದ ಒನ್ವೆಬ್ ಗ್ರೂಪ್ಗೆ ಸೇರಿದ 36 ಉಪಗ್ರಹಗಳನ್ನು ಹೊತ್ತ ಇಸ್ರೊದ ಅತ್ಯಂತ ಭಾರವಾದ ಲಾಂಚ್ ವೆಹಿಕಲ್ ಮಾರ್ಕ್-3 ಉಡಾವಣಾ ನೌಕೆ ಮಾ.26ರ ರವಿವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಹಾರಿಸಲಾಯಿತು.
ಇಸ್ರೊದ ವಾಣಿಜ್ಯ ಘಟಕ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಬ್ರಿಟನ್ನ ನೆಟ್ವರ್ಕ್ ಆಕ್ಸೆಸ್ ಅಸೋಸಿಯೇಟ್ಸ್ ಲಿಮಿಟೆಡ್ ಸಂಸ್ಥೆಯೊಂದಿಗಿನ ಒಪ್ಪಂದದಂತೆ ನಡೆಸಿದ ಎರಡನೇ ಉಡಾವಣಾ ಕಾರ್ಯಾಚರಣೆ ಇದಾಗಿದ್ದು, ಇದೇ ಯೋಜನೆಯನ್ವಯ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ 36 ಉಪಗ್ರಹಗಳನ್ನು ಉಡ್ಡಯನ ಮಾಡಲಾಗಿತ್ತು. ಈ ಮೂಲಕ ಭೂಮಿಗೆ ಸಮೀಪದ ಕಕ್ಷೆಗೆ ಒಟ್ಟು 72 ಸಂವಹನ ಉಪಗ್ರಹಗಳನ್ನು ಸೇರಿಸಲಾಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ