



ಮಂಗಳೂರು: ಪಣಂಬೂರು ಠಾಣೆ ವ್ಯಾಪ್ತಿಯ ಮೀನಕಳಿಯದಲ್ಲಿ ಇಸ್ಪೀಟ್ ಜೂಜಾಟ ಅಡ್ಡೆಗೆ ಪೊಲೀಸರು ದಾಳಿ ನಡೆಸಿದ್ದು 14 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.







ಮೀನಕಳಿಯದ ರೈಲ್ವೇ ಟ್ರಾಕ್ ಬಳಿಯ ಕಟ್ಟಡ ಒಂದರಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು ಅಂದರ್ ಬಾಹರ್ ಆಟಗಾರರು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಒಟ್ಟು 14 ಮಂದಿಯನ್ನು ವಶಕ್ಕೆ ಪಡೆದಿದ್ದು,ಅವರಿಂದ 78,810 ರೂಪಾಯಿ ನಗದು, 11 ಮೊಬೈಲ್ ಹಾಗೂ ಎರಡು ಬೈಕ್ ವಶಕ್ಕೆ ಪಡೆಯಲಾಗಿದೆ.














