ಬ್ರೇಕ್ ಡೌನಾದ ಕಾರಿನಲ್ಲಿ ಮದ್ಯ, ಲಾಂಗ್‌ ,‌ ಸಿ ಟಿ ರವಿ ಕ್ಯಾಲೆಂಡರ್ ಪತ್ತೆ

ಮಂಗಳೂರು : ಎಐಟಿ ಸರ್ಕಲ್‌ನಲ್ಲಿ ಕಾರೊಂದು ಬ್ರೇಕ್ ಡೌನ್‌ ಆಗಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಸಿ.ಟಿ.ರವಿ ಭಾವಚಿತ್ರವುಳ್ಳ ಕ್ಯಾಲೆಂಡರ್‌, ಮದ್ಯ, ಮಾರಾಕಾಸ್ತ್ರಗಳು ಪತ್ತೆಯಾಗಿದೆ.

ಅಪಘಾತಕ್ಕೀಡಾದ ಕಾರನ್ನು ತಳ್ಳುವ ವೇಳೆ ಚಾಲಕ ಮತ್ತು ಅಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಕಾರಿನೊಳಗಡೆ ನೋಡಿದಾಗ ಅದರಲ್ಲಿ ಬಾರೀ ಪ್ರಮಾಣದ ಮದ್ಯದ ಪ್ಯಾಕೇಟ್‌, ಲಾಂಗ್‌ , ಸಿ ಟಿ ರವಿ ಭಾವಚಿತ್ರವುಳ್ಳ ಕ್ಯಾಲೆಂಡರ್‌ ಪತ್ತೆಯಾಗಿದೆ. ಈ ವೇಳೆ ಅಲ್ಲಿ ಜಮಾಯಿಸಿದ್ದ ಸ್ಥಳೀಯರು ಕಾರಿನಲ್ಲಿದ್ದ ವಸ್ತುಗಳನ್ನು ಹೊರ ತೆಗೆದು ಸಿ ಟಿ ರವಿ ವಿರುದ್ದ ಘೋಷಣೆ ಕೂಗಿ ಓಟಿಗಾಗಿ ಬಡವರಿಗೆ ಮದ್ಯ ಹಂಚುತ್ತಿರುವ ಸಿ ಟಿ ರವಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಇದೇ ವೇಳೆ ಓಡಿ ಹೋಗಲು ಪ್ರಯತ್ನಿಸಿದ ಕಾರು ಚಾಲಕನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. 

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here