ಬೈಕ್‌ ಕಳ್ಳರಿದ್ದಾರೆ ಎಚ್ಚರಿಕೆ……..

ಮಂಗಳೂರು: ಉಳ್ಳಾಲದಲ್ಲಿ ಸರಣಿ ಬೈಕ್ ಕಳ್ಳತನ ನಡೆದಿದ್ದು ಕೋಟೆಕಾರಿನ ಕೊರಗಜ್ಜನ ಕಟ್ಟೆಯ ಬಳಿ ನಿಲ್ಲಿಸಲಾಗಿದ್ದ ಬೈಕನ್ನು ನಸುಕಿನ ವೇಳೆ ಇಬ್ಬರು ಕಳ್ಳರು ಕಳವು ನಡೆಸಿರುವ ಘಟನೆ ನಡೆದಿದೆ.

ಕಳ್ಳರಿಬ್ಬರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೋಟೆಕಾರು ವಿನಾಯಕ ಇಲೆಕ್ಟ್ರಿಕಲ್ಸ್ ನ ಡಿಜೆ ಪ್ಲೇಯರ್ ರಾಜೇಶ್ ಎಂಬವರು ಒಳ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕನ್ನ ಕಳವು ಮಾಡಲಾಗಿದೆ.ಮಂಗಳವಾರ ಮುಂಜಾನೆ ನಸುಕಿನ 1.42 ರ ವೇಳೆ ಇಬ್ಬರು ಕಳ್ಳರು ಬೈಕನ್ನು ಕಳವು ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಬೈಕ್‌ ನ್ನು ಕಂಡ ಕಂಡಲ್ಲಿ ಪಾರ್ಕ್‌ ಮಾಡುವವರು ಜಾಗೃತೆ ವಹಿಸಬೇಕಾದ ಅಗತ್ಯವಿದೆ.

 

 ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ 

LEAVE A REPLY

Please enter your comment!
Please enter your name here