ಮಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಉಪಮೇಯರ್ ಆಯ್ಕೆಗೆ ತೆರೆ ಬಿದ್ದಿದೆ. ಬಳ್ಳಾರಿಯ 4ನೇ ವಾರ್ಡ್ ನ ಸದಸ್ಯೆ ತ್ರಿವೇಣಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಅತೀ ಕಿರಿಯ ವಯಸ್ಸಿನ ಪಾಲಿಕೆ ಸದಸ್ಯೆ ಮತ್ತು ಕಿರಿಯ ವಯಸ್ಸಿನ ಮೇಯರ್ ಎಂಬ ಕೀರ್ತಿಗೆ ಪಾತ್ರರಾಗಿರುವ ತ್ರಿವೇಣಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ತ್ರಿವೇಣಿ ರಾಜ್ಯದಲ್ಲಿಯೇ ಅತೀ ಕಿರಿಯ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಉಪಮೇಯರ್ ಆಗಿ 33ನೇ ವಾರ್ಡ್ ನ ಜಾನಕಮ್ಮ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಮುಖಂಡ ಡಿ.ಸೂರಿ ಅವರ ಪತ್ನಿ ಈ ಹಿಂದೆ 2019ರಲ್ಲಿ ಮೇಯರ್ ಆಗಿ ಕಾರ್ಯ ನಿರ್ವಹಿಸಿದ್ದರು. ಈಗ ಅವರ ಪುತ್ರಿ ತ್ರಿವೇಣಿ ಮೇಯರ್ ಆಗಿದ್ದು ಒಂದೇ ಮನೆಯಿಂದ ಇಬ್ಬರು ಮೇಯರ್‌ಗಳನ್ನು ನೀಡಿದ ಖ್ಯಾತಿ ಡಿ.ಸೂರಿಯವರದ್ದಾಗಿದೆ. ಬಳ್ಳಾರಿಯ ನಾಲ್ಕನೇ ವಾರ್ಡ್ ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿರುವ ತ್ರಿವೇಣಿಗೆ 23 ವರ್ಷ. ಹೆಲ್ತ್ ಇನ್ಸ್‌ಪೆಕ್ಟರ್ ಕೋರ್ಸ್ ಪೂರೈಸಿರುವ ತ್ರಿವೇಣಿ ಮೇಯರ್ ಅಗಲು ಸಹಕಾರ ನೀಡಿದ ಎಲ್ಲಾ ಪಾಲಿಕೆ ಸದಸ್ಯರಿಗೆ ಪಕ್ಷದ ಮುಖಂಡರಿಗೆ ದನ್ಯವಾದಗಳನ್ನ ಅರ್ಪಿಸಿದರು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ