ಮಂಗಳೂರು: ಔಷದಿಗಳ ಮೇಲಿನ ಬೆಲೆಯನ್ನು ಶೇ 12.12 ರಷ್ಟು ಹೆಚ್ಚಳ ಮಾಡಲು ರಾಷ್ಟ್ರೀಯ ಔಷಧಿ ಬೆಲೆ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿದ್ದು ಏಪ್ರಿಲ್ ಒಂದರಿಂದ ಸುಮಾರು 800 ಕ್ಕೂ ಹೆಚ್ಚು ಔಷಧಿಗಳ ಬೆಲೆಯಲ್ಲಿ ಏರಿಕೆಯಾಗಲಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಏಪ್ರಿಲ್ ಒಂದರಿಂದ ಔಷಧಿಗಳ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಕಳೆದ ವರ್ಷ ಶೇ 10.76 ರಷ್ಟು ಬೆಲೆ ಏರಿಕೆಯಾಗಿತ್ತು.