ಮಂಗಳೂರು: ಇದು ಸ್ಮಶಾನ ಮತ್ತು ಸಮಾಧಿರುವೆಡೆ ಇರುವಂತಹ ಒಂದು ವಿಚಿತ್ರ ಪ್ರಾಣಿ. ಇದು ಬಯಲು ಪ್ರದೇಶದಲ್ಲಾಗಲೀ,ಕಾಡಲ್ಲಾಗಲೀ ಕಂಡುಬರುವುದಿಲ್ಲ. ಆದರೆ ಸ್ಮಶಾನಗಳಲ್ಲಿ ಅಥವಾ ಸಮಾಧಿ ಸ್ಥಳಗಳಲ್ಲಿ ಮಾತ್ರ ಕಂಡು ಬರುತ್ತದೆ.
ಆದರೆ ಜನರ ಕಣ್ಣಿಗೆ ಗೋಚರಿಸುವುದು ಬಹಳ ಕಡಿಮೆ. ಏಕೆಂದರೆ ಇದು ಇರುವುದೇ ಭೂಮಿಯೊಳಗೆ. ಭೂಮಿಯಲ್ಲಿ ಹೂತಿಟ್ಟ ಹೆಣಗಳನ್ನು ತಿನ್ನುವ ಈ ಪ್ರಾಣಿಯ ಕೂಗು ಮಾತ್ರ ವಿಚಿತ್ರವಾದದ್ದು. ಹಗಲೋ ಇರುಳೋ ಯಾರಾದರೂ ಸ್ಮಶಾನದ ದಾರಿಯಲ್ಲಿ ಹಾದು ಹೋಗುವ ವೇಳೆ ಇದರ ಕೂಗು ಕೇಳಿದರೆ ಭಯಭೀತರಾಗಿ ಎದೆಯೊಡೆಯದೆ ಬಾಕಿ ಉಳಿದರೆ ಪುಣ್ಯ ಎನ್ನಬೇಕು. ಅಥವಾ ಇದರ ಕೂಗು ಕೇಳಿ ಭೂತ ಪ್ರೇತದ ಧ್ವನಿಯೆಂದು ತಿಳಿದು ಕೊಂಡರೂ ಅತಿಶಯವಿಲ್ಲ. ಸಂಶಯ ಬೇಡ. ಈ ವೀಡಿಯೊವನ್ನು ವೀಕ್ಷಿಸಿದರೆ ನಿಮ್ಮೆಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ. ಬಿಜ್ಜು, ಕಬರ್ಬಿಜ್ಜು, ಗ್ರೇವ್ ಡಿಗ್ಗರ್ ಎಂದು ಕರೆಯುವ ಈ ವಿಚಿತ್ರ ಪ್ರಾಣಿಯ ಧ್ವನಿಯನ್ನು ಕೇಳಿ, ಎಲ್ಲವೂ ಅರ್ಥವಾಗುತ್ತದೆ…!
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ