ಖಾಸಗಿ ಶಾಲೆಗಳಲ್ಲಿ ಶೇ.15 ಕ್ಕಿಂತ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ

ಮಂಗಳೂರು: ಖಾಸಗಿ ಶಾಲೆಗಳ ಶುಲ್ಕ ನಿಗಧಿ ವಿಚಾರವಾಗಿ ಹೈಕೋರ್ಟ್‍ನ ತೀರ್ಪು ನಮಗೆ ಸಂತೋಷವನ್ನು ತಂದರೂ, ತೀರ್ಪನ್ನು ದುರುಪಯೋಗಪಡಿಸಿಕೊಂಡು ಕೆಲ ಖಾಸಗಿ ಶಾಲೆಗಳು ಶೇ.40ರಷ್ಟು ಶುಲ್ಕವನ್ನು ಏರಿಕೆ ಮಾಡಿವೆ ಎಂದು ಖಾಸಗಿ ಶಾಲಾ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. 

ಎ.6ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಖಾಸಗಿ ಶಾಲಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಮಾತನಾಡಿ, ರಾಜ್ಯ ಸರಕಾರವೇ ಪಠ್ಯಪುಸ್ತಕಗಳಿಗೆ ಶುಲ್ಕವನ್ನು ಹೆಚ್ಚಳ ಮಾಡಿರುವಾಗ, ಖಾಸಗಿ ಶಾಲೆಗಳು ಖರ್ಚು-ವೆಚ್ಚಗಳಿಗೆ ಅನುಗುಣವಾಗಿ ಶೇ.15ರಷ್ಟು ಶುಲ್ಕವನ್ನು ಹೆಚ್ಚಳ ಮಾಡುವಲ್ಲಿ ತಪ್ಪಿಲ್ಲ. ಆದರೆ ಏಕಾಏಕಿ ಕೆಲ ಖಾಸಗಿ ಶಾಲೆಗಳು ಶೇ.40ರಷ್ಟು ಶುಲ್ಕವನ್ನು ಹೆಚ್ಚಳ ಮಾಡಿವೆ. ಇಂತಹ ಶಾಲೆಗಳ ಪಟ್ಟಿಯೊಂದಿಗೆ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಲಾಗಿದೆ ಎಂದರು.  ಶೇ.40ರಷ್ಟು ಶುಲ್ಕವನ್ನು ಹೆಚ್ಚಳ ಮಾಡಿರುವ ಶಾಲೆಗಳನ್ನು ಪಟ್ಟಿಯನ್ನು ನೀಡುವಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಶಾಲೆಗಳ ಪಟ್ಟಿಯನ್ನು ನಿಮಗೆ ನೀಡುವುದಿಲ್ಲ. ಇಲಾಖೆಗೆ ದೂರು ಪ್ರತಿಯೊಂದಿಗೆ ಸಲ್ಲಿಸಿದ್ದೇವೆ. ಹಾಗೆಯೇ ಶಾಲೆಗಳಲಿ ಶುಲ್ಕವನ್ನು ಶೇ.15ಕ್ಕಿಂತ ಹೆಚ್ಚು ಮಾಡಿದರೆ, ಪೋಷಕರು ಶಿಕ್ಷಣ ಇಲಾಖೆಗೆ ಅಥವಾ ನಮ್ಮ ಸಂಘಟನೆಗೆ ದೂರನ್ನು ನೀಡಲಿ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಶಿಕ್ಷಣ ಸಂಸ್ಥೆಗಳ ಸಂಘಟನೆಗಳ ಪದಾಧಿಕಾರಿಗಳಾದ ಶ್ರೀನಿವಾಸ್, ಇಕ್ಬಾಲ್, ಗಾಯತ್ರಿದೇವಿ, ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿ ದ್ದರು. 

LEAVE A REPLY

Please enter your comment!
Please enter your name here