ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ಅವರನ್ನು ಕೊಲೆ ಮಾಡುವುದಾಗಿ ಮಾಧ್ಯಮ ಸಂಸ್ಥೆಯೊಂದಕ್ಕೆ ಬೆದರಿಕೆ ಈಮೇಲ್ ಕಳಿಸಿದ್ದ ಕಾಲೇಜು ವಿದ್ಯಾರ್ಥಿಯನ್ನು ನೋಯಿಡಾ ಪೊಲೀಸರು ಏ.7ರಂದು ಬಂಧಿಸಿದ್ದಾರೆ.
ಬಿಹಾರ ಮೂಲದ 16 ವರ್ಷದ ಪಿ ಯು ವಿದ್ಯಾರ್ಥಿಯೊಬ್ಬ ಈ ಕೃತ್ಯ ಎಸಗಿದ್ದು ಲಕ್ನೋದ ಚಿನ್ನತ್ ಪ್ರದೇಶದಲ್ಲಿ ಯುವಕನನ್ನು ಬಂಧಿಸಿ ನೋಯಿಡಾಗೆ ಕರೆತರಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಏ.5 ರಂದು ನೋಯಿಡಾದ 20ನೇ ಸೆಕ್ಟರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.