ಸರಕಾರಿ ಅಧಿಕಾರಿಯಿಂದ ವರದಕ್ಷಿಣೆಗಾಗಿ ಕಿರುಕುಳ

ಮಂಗಳೂರು: ಕೊಡಗು ಜಿಲ್ಲಾ ಪಂಚಾಯತ್ ಸಿಇಒ ಡಾ. ಆಕಾಶ್ ವಿರುದ್ಧ ಪತ್ನಿ ವಂದನಾ ವರದಕ್ಷಿಣೆ ದೂರು ದಾಖಲಿಸಿದ್ದಾರೆ.

ನಿವೃತ್ತ ಐಜಿಪಿ ಪುತ್ರಿಯಾಗಿರುವ ವಂದನಾ ಅವರ ವಿವಾಹ ಕಳೆದ 2022 ರಲ್ಲಿ ಡಾ. ಆಕಾಶ್ ಅವರೊಂದಿಗೆ ನಡೆದಿತ್ತು. ಮದುವೆ ವೇಳೆ ಕೋಟ್ಯಂತರ ರೂಪಾಯಿ ಚಿನ್ನಾಭರಣ ಮತ್ತು ನಗದು ನೀಡಲಾಗಿತ್ತು. ಆದರೆ ಬೆಂಗಳೂರಿನಲ್ಲಿ ಮನೆ ಕೊಡಿಸುವಂತೆ ವರದಕ್ಷಿಣೆ ಕಿರುಕುಳ ನೀಡುತ್ತಿರುವುದಾಗಿ ಬೆಂಗಳೂರಿನ ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ವಂದನಾ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here