ಮಂಗಳೂರು: ಸುಳ್ಯದ ಅರಂತೋಡು ಅರಮನೆಗಯ ಪ್ರದೇಶದ ನಿವಾಸಿಗಳು ಮತ್ತು ಸುತ್ತುಮುತ್ತಲಿನ ಗ್ರಾಮವಾಸಿಗಳು ಮುಂಬರುವ ವಿಧಾನಸಭಾ ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದಾರೆ.
ಕಳೆದ ಆರು ಬಾರಿ ಚುನಾಯಿತರಾದ ಸಚಿವ ಅಂಗಾರ ಪ್ರತಿನಿಧಿಸುತ್ತಿರುವ ಕ್ಷೇತ್ರದ ವ್ಯಾಪ್ತಿಯಲ್ಲಿನ ಈ ಪ್ರದೇಶದ ಜನರು ಕಳೆದ 30 ವರ್ಷಗಳಿಂದ ಸೇತುವೆಗಾಗಿ ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ.
ಪರ್ಯಾಯ ಮಾರ್ಗ ಬಳಸಿದರೆ ಸುಮಾರು 15 ಕಿ.ಮೀ ಹೆಚ್ಚು ಕ್ರಮಿಸಬೇಕಾಗುತ್ತದೆ. ಇದರಿಂದ ಶಾಲಾ ಕಾಲೇಜು ಮತ್ತು ಕೆಲಸಕ್ಕೆ ತೆರಳುವವರಿಗೆ ತೊಂದರೆಯಾಗುತ್ತದೆ ಎನ್ನುವ ಗ್ರಾಮಸ್ಥರ ಮನವಿಗೆ ಯಾರು ಸ್ಪಂದಿಸಿಲ್ಲ.
ಇದರಿಂದ ಅನಿವಾರ್ಯವಾಗಿ ಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ನಿರ್ಧಾರಕ್ಕೆ ಬಂದಿದ್ದಾರೆ. ಅರಮನೆಗಯಕ್ಕೆ ಸೇತುವೆ ಆಗುವವರೆಗೆ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಮಾತ್ರವಲ್ಲ ಮನೆಮನೆಗಳಲ್ಲಿ ಬ್ಯಾನರ್ ಬಿತ್ತಿ ಪತ್ರ ಅಳವಡಿಸಿದ್ದಾರೆ.