ಮಂಗಳೂರು: ಆನೆ ಮರಿಯೊಂದು ತಾಯಿಯಿಂದ ಬೇರ್ಪಟ್ಟು ರಸ್ತೆಯಲ್ಲಿ ಘೀಳಿಡುತ್ತಾ ಗ್ರಾಮದ ತುಂಬಾ ಓಡಾಡುವ ದೃಶ್ಯ ನೋಡಿದರೆ ಯಾರಿಗೂ ಬೇಸರವಾಗದಿರದು.
ಎರಡು ದಿನಗಳ ಹಿಂದೆ ಆಹಾರ ಹುಡಿಕಿ ಕಾಡಿನಿಂದ ನಾಡಿಗೆ ಬಂದ ಎರಡು ಆನೆ ಮತ್ತು ಎರಡು ಆನೆ ಮರಿಗಳು ಕೆರೆಗೆ ಬಿದ್ದಿದ್ದು ಮೂರನೇ ದಿನ ರಕ್ಷಿಸಲಾಗಿತ್ತು. ನಾಲ್ಕು ಆನೆಗಳು ಕಾಡಿನತ್ತ ಹೆಜ್ಜೆ ಹಾಕಿದ್ದರೂ 3 ತಿಂಗಳ ಮರಿಯಾನೆ ತಾಯಿಯ ಮಡಿಲು ಸೇರಿಲ್ಲ. ತಾಯಿಯಿಂದ ಅಗಲಿರುವ ಆನೆ ಮರಿ ಅಜ್ಜಾವರ ಗ್ರಾಮದ ಪರಿಸರದಲ್ಲಿ ಓಡಾಡುತ್ತಿದೆ. ಅರಣ್ಯ ಇಲಾಖೆ ನಿಗಾದಲ್ಲಿರುವ ಆನೆಮರಿಗೆ ಈಗ ಸ್ಥಳೀಯರೇ ಆಸರೆ. ತಾಯಿಗಾಗಿ ಹಂಬಲಿಸುತ್ತಿರುವ ಆನೆ ಮರಿ ಕಂಡು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆನೆ ಮರಿಗೆ ನೀರು, ಆಹಾರ, ಪೌಷ್ಟಿಕಾಂಶ ನೀಡಿ ಅರಣ್ಯ ಇಲಾಖೆ ಆರೈಕೆ ಮಾಡುತ್ತಿದೆ. ತಾಯಿಯ ಜೊತೆ ಸೇರಿಸುವ ಪ್ರಯತ್ನ ಮುಂದುವರಿದಿದೆ. ಪರಿಣಿತರ ವಿಶೇಷ ತಂಡವು ಇದಕ್ಕಾಗಿ ಆಗಮಿಸಲಿದೆ ಎಂದು ವಲಯ ಅರಣ್ಯ ಅಧಿಕಾರಿ ತಿಳಿಸಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ