ಮಂಗಳೂರು (ಜಮ್ಮು-ಕಾಶ್ಮೀರ): ಕಾಶ್ಮೀರದ ಲೋಹಾಯಿ ಮೇಲ್ಹಾರ್ ಗ್ರಾಮದ ಸರಕಾರಿ ಶಾಲಾ ವಿದ್ಯಾರ್ಥಿನಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳುಹಿಸಿದ ವಿಡಿಯೋ ಸಂದೇಶ 20 ಲಕ್ಷ ವೀಕ್ಷಣೆಯೊಂದಿಗೆ ಮತ್ತೆ ಒಂದು ಲಕ್ಷದ 16 ಸಾವಿರದಷ್ಟು ಲೈಕ್ ಪಡೆದಿದೆ.
ಸೀರತ್ ನಾಝ್ ಎಂಬ ಈ ಬಾಲಕಿ ಶಾಲೆಯಲ್ಲಿ ತನ್ನ ಗೆಳತಿಯರೊಂದಿಗೆ ಕೊಳಕಾದ ನೆಲದಲ್ಲಿ ಕುಳಿತುಕೊಳ್ಳುವ ಅನಿವಾರ್ಯತೆಯ ಬಗ್ಗೆ ಬೇಸರಗೊಂಡಿದ್ದು, ದೇಶದ ಅತ್ಯುನ್ನತ ಹುದ್ದೆಯಲ್ಲಿರುವವರು ಇದಕ್ಕಾಗಿ ಏನನ್ನಾದರೂ ಮಾಡಬೇಕು ಎಂದು ಬಯಸಿ ಈ ವಿಡಿಯೋ ಮಾಡಿ ಕಳುಹಿಸಿದ್ದಾಳೆ. ಮೋದಿಜಿ ಹೇಗಿದ್ದೀರಿ? ನನಗೆ ನಿಮ್ಮೊಂದಿಗೆ ಒಂದು ಮಾತನ್ನು ಹೇಳಬೇಕಿದೆ, ನೀವು ಎಲ್ಲರ ಮಾತನ್ನು ಕೇಳುತ್ತೀರಿ ಇಂದು ನನ್ನ ಮಾತನ್ನು ಕೇಳಿ ಎಂದು ಮಾತು ಆರಂಭಿಸಿದ ನಾಝ್ ತನ್ನ ಶಾಲೆಯ ಕೊಳಕು ನೆಲ, ಕುಳಿತುಕೊಳ್ಳುವ ಗೋಣಿಚೀಲ, ಬೆಂಚುಗಳಿಲ್ಲದಿರುವುದು, ಐದು ವರ್ಷವಾದರೂ ಅಪೂರ್ಣ ಶಾಲಾ ಕಟ್ಟಡವನ್ನು ವಿಡಿಯೋದಲ್ಲಿ ತೋರಿಸಿರುವ ನಾಝ್ ಮೋದಿಜಿ ದಯವಿಟ್ಟು ನಮಗೊಂದು ಒಳ್ಳೆಯ ಶಾಲೆ ನಿರ್ಮಿಸಿ ಕೊಡಿ ಎಂದು ವಿನಂತಿಸಿಕೊಂಡಿದ್ದಾಳೆ. ಮಾತ್ರವಲ್ಲ ಶಾಲೆಯಲ್ಲಿರುವ ಕೊರತೆಯನ್ನು ವಿಡಿಯೋದಲ್ಲಿ ತೋರಿಸಲಾಗಿದ್ದು, ಅಭಿವೃದ್ಧಿಗಾಗಿ ಏನು ಮಾಡಬಹುದು ಎಂದು ಅಧಿಕಾರಿಗಳಿಗೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾಳೆ. ಇದನ್ನು ಜಮ್ಮು ಕಾಶ್ಮೀರದ ಮಾರ್ಮಿಕ್ ನ್ಯೂಸ್ ನ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಲಾಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ