ಮಂಗಳೂರು: ಗೋ ಮೂತ್ರದಲ್ಲಿ 14 ವಿಧದ ಹಾನಿಕಾರಕ ಬ್ಯಾಕ್ಟೀರಿಯ ಪತ್ತೆಯಾಗಿದ್ದು, ಸೇವನೆಗೆ ಯೋಗ್ಯವಲ್ಲ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಹಸುಗಳ ಮತ್ತು ಗೂಳಿಗಳ ಮೂತ್ರದ ಮಾದರಿಗಳನ್ನು ಸಂಗ್ರಹಿಸಿದ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ಮಾನವನ ಹೊಟ್ಟೆಯ ಸೋಂಕಿಗೆ ಕಾರಣವಾಗುವ 14 ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳು ಪತ್ತೆಯಾಗಿದೆ. ಸಂಶೋಧನೆಗೆ ಡೈರಿ ಫಾರ್ಮ್ ಗಳಿಂದ ಥಾರ್ಪಾರ್ಕರ್ ಸಾಹಿವಾಲ್ ಮತ್ತು ವಿಂದಾವಣಿ ತಳಿಗಳ ಮೂತ್ರಗಳನ್ನು ಸಂಶೋಧನೆಗೆ ಬಳಸಲಾಗಿತ್ತು.