lಮಂಗಳೂರು: ಇತ್ತೀಚೆಗೆ ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿ ಮೂವರ ಸಾವಿಗೆ ಕಾರಣವಾದ ಘಟನೆಯಲ್ಲಿ ಆರೋಪಿಯಾಗಿರುವ ದೆಹಲಿ ಮೂಲದ ಶಾರುಖ್ ಸೈಫಿ ಬಗ್ಗೆ ಕೇರಳ ಪೊಲೀಸರು ಸ್ಫೋಟಕ ಮಾಹಿತಿ ಹೊರಗೆಡವಿದ್ದಾರೆ.
ಶಾರುಖ್ ಮೂಲಭೂತವಾದಿಯಾಗಿದ್ದು ವಿವಾದಿತ ಇಸ್ಲಾಂ ಬೋಧಕ ಜಾಕೀರ್ ನಾಯಿಕ್ ನ ಕಟ್ಟಾ ಅನುಯಾಯಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾರುಖ್ ನಿರಂತರವಾಗಿ ಝಕೀರ್ ನಾಯಿಕ್ ನ ಕೋಮು ಪ್ರಚೋದತ ವಿಡಿಯೋಗಳನ್ನು ನೋಡುತ್ತಿದ್ದ, ಸ್ನೇಹಿತರಲ್ಲಿ ಬಂಧು ಬಳಗದಲ್ಲಿ ದ್ವೇಷ ಕಾರುವ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದ ಎಂದು ತನಿಖೆ ನಡೆಸುತ್ತಿರುವ ಎಡಿಜಿಪಿ ಎಂ ಆರ್ ಅಜಿತ್ ಕುಮಾರ್ ತಿಳಿಸಿದ್ದಾರೆ. ಬಂದಿತನ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದು ಆತನ ಕೈವಾಡಗಳ ಕುರಿತು ತನಿಖೆ ಮತ್ತು ರೈಲಿಗೆ ಬೆಂಕಿ ಇಡಲು ನಿರ್ದಿಷ್ಟ ಕಾರಣಗಳ ಬಗ್ಗೆ ವಿಸ್ತೃತ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಆಲಪುಳ ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲಿಗೆ ಏಪ್ರಿಲ್ ಎರಡರಂದು ಬೆಂಕಿ ಹಚ್ಚಿದ್ದು ಘಟನೆಯಲ್ಲಿ ಮೂವರು ಮೃತಪಟ್ಟು 9 ಜನ ಗಾಯಗೊಂಡಿದ್ದರು. ಏಪ್ರಿಲ್ 9ರಂದು ರತ್ನಗಿರಿಯಲ್ಲಿ ಶಾರುಕ್ನ. ನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆ ಬಂಧಿಸಿ ಕೇರಳ ಪೊಲೀಸರ ವಶಕ್ಕೆ ನೀಡಿತ್ತು.