ಮಂಗಳೂರು(ಒಡಿಶಾ): ಅನಾಮಿಕ ಕಳ್ಳನೊಬ್ಬ ಒಂಬತ್ತು ವರ್ಷಗಳ ಬಳಿಕ ದೇವಸ್ಥಾನವೊಂದರಿಂದ ಕಳವು ಮಾಡಿದ್ದ ಆಭರಣಗಳನ್ನು ಹಿಂದಿರಿಗಿಸುವ ಮೂಲಕ ಕ್ಷಮೆ ಕೇಳಿದ ಅಪರೂಪದ ಘಟನೆ ಒಡಿಶಾದಲ್ಲಿ ನಡೆದಿದೆ.
2014 ರ ಮೇ ತಿಂಗಳಲ್ಲಿ ಭುವನೇಶ್ವರದ ಧ್‌ಲಿ ಪ್ರದೇಶದ ಗೋಪಿನಾಥಪುರದ ದೇವಸ್ಥಾನದಿಂದ ಕಿವಿಯೋಲೆ, ಬಳೆಗಳು, ಕೊಳಲು ಮತ್ತು ತಲೆಯ ಕಿರೀಟ ಸೇರಿದಂತೆ ಸುಮಾರು 4 ಲಕ್ಷ ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿತ್ತು.
ದೇವಸ್ಥಾನಲ್ಲಿ ಯಜ್ಞ ನಡೆಯುತ್ತಿದ್ದ ವೇಳೆ ಆಭರಣ ಕದ್ದಿದ್ದೆ, ನಂತರ ದಿನಗಳಲ್ಲಿ ಸಾಕಷ್ಟು ಕಷ್ಟ ಅನುಭವಿಸಿದೆ. 9 ವರ್ಷದ ಬಳಿಕ ದೇವರ ಮುಂದೆ ಶರಣಾಗಿ ಆಭರಣ ಹಿಂದಿರಿಗಿಸಲು ನಿರ್ಧರಿಸಿದೆ. ನನ್ನ ಹೆಸರನ್ನು ಇಲ್ಲಿ ಉಲ್ಲೇಖಿಸುತ್ತಿಲ್ಲ ನನ್ನ ಕೃತ್ಯಕ್ಕೆ ವಿಷಾಧಿಸುತ್ತೇನೆ, ಕ್ಷಮೆ ಇರಲಿ ಎಂದು ಬರೆದ ಪತ್ರದೊಂದಿಗೆ ಕಳ್ಳ ಆಭರಣ ಹಿಂದಿರುಗಿಸಿದ್ದಾನೆ.
ದೇವಸ್ಥಾನಕ್ಕೆ ದೇಣಿಗೆಯಾಗಿ 201 ರೂಪಾಯಿ ಮತ್ತು ಪ್ರಾಯಶ್ಚಿತ ದಂಡ 100 ರೂಪಾಯಿಯನ್ನು ಆಭರಣದೊಂದಿಗೆ ಕಳುಹಿಸುವುದಾಗಿ ದೇವಸ್ಥಾನದ ಅರ್ಚಕ ಕೈಲಾಶ್ ಪಾಂಡಾ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಲಾಗಿದ್ದು ತನಿಖೆ ನಡೆಯುತ್ತಿದೆ.