ಮುಂಬೈ ದಾಳಿ ಶಂಕಿತ ಆರೋಪಿ ಭಾರತಕ್ಕೆ- ಅಮೆರಿಕಾ ನ್ಯಾಯಾಲಯ ಆದೇಶ

ಮಂಗಳೂರು: ಮುಂಬೈ ದಾಳಿ ಪ್ರಕರಣದ ಶಂಕಿತ, ಅಮೆರಿಕಾದಲ್ಲಿ ಬಂಧಿಸಲಾಗಿದೆ. ಉಗ್ರ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕಾ ನ್ಯಾಯಾಲಯ ಅನುಮತಿ ನೀಡಿದೆ. 2008 ರಲ್ಲಿ ನಡೆದ ದಾಳಿಯ ಪ್ರಮುಖ ಶಂಖಿತ ಡೇವಿಡ್ ಹೆಡ್ಲಿ, ಅಮೆರಿಕಾದಲ್ಲಿ ಬಂಧನದಲ್ಲಿದ್ದಾನೆ.

ಈತನ ಸ್ನೇಹಿತ ಮತ್ತು ಸಹವರ್ತಿ ಕೆನಡಾದಲ್ಲಿ ನೆಲೆಸಿದ್ದ ಪಾಕಿಸ್ತಾನ ಮೂಲದ ಉದ್ಯಮಿ ತಹವ್ವೂರ್ ರಾಣಾನನ್ನು 2020ರಲ್ಲಿ ಅಮೆರಿಕದಲ್ಲಿ ಬಂಧಿಸಲಾಗಿತ್ತು. ಈತನನ್ನು ವಾಂಟೆಡ್ ಕ್ರಿಮಿನಲ್ ಎಂದು ಘೋಷಿಸಿ, ಭಾರತಕ್ಕೆ ಹಸ್ತಾಂತರಿಸುವಂತೆ ಕೋರಿ ಸಿಬಿಐ ಅಮೆರಿಕದ ಚಿಕಾಗೋ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.

LEAVE A REPLY

Please enter your comment!
Please enter your name here