



ಮಂಗಳೂರು: ಜೋಧ್ ಪುರದ ಏಮ್ಸ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮತ್ತು ಇಂಟರ್ ನ್ಯಾಷನಲ್ ಯೂನಿಯನ್ ಅಗ್ರೆನ್ಸ್ ಟ್ಯುಬರ್‌ಕ್ಯುಲೋಸಿಸ್ ಮತ್ತು ಲಂಗ್ ಟಿನೀಸ್ ಸಂಸ್ಥೆ ಬೀಡಿ ಉದ್ಯಮದ ಮೇಲೆ ತಂಬಾಕು ಉತ್ಪನ್ನಗಳ ಮಾದರಿಯಲ್ಲೇ ತೆರಿಗೆ ಹೆಚ್ಚಳ ಮಾಡಿ ನಿಯಂತ್ರಣ ಕ್ರಮಗಳನ್ನು ಬಲಪಡಿಸಬೇಕು ಎಂದು ಶಿಫಾರಸು ಮಾಡಿದೆ.







ಬೀಡಿ ಉದ್ಯಮಕ್ಕೆ ನೀಡಿರುವ “ಗುಡಿಕೈಗಾರಿಕೆ” ಸ್ಥಾನಮಾನವನ್ನು ರದ್ದು ಮಾಡಿ ತೆರಿಗೆ ಹೆಚ್ಚಳ ಮಾಡಬೇಕು. ಆಗ ಬೀಡಿ ದರ ಸಹಜವಾಗಿಯೇ ಏರಿಕೆ ಕಾಣುತ್ತದೆ ಮತ್ತು ಬೇಡಿಕೆ ತಗ್ಗುತ್ತದೆ. ಇದಲ್ಲದೆ ಬೀಡಿ ಉತ್ಪನ್ನಗಳ ಮೇಲಿನ ನಿಯಂತ್ರಣವನ್ನು ಹೆಚ್ಚಿಸಬೇಕೆಣದು ಶಿಫಾರಸು ಮಾಡಿದೆ.














