ಮಂಗಳೂರು; ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ತನ್ನ ಇಬ್ಬರು ಹೆಣ್ಣು ಮಕ್ಕಳು ನಿತ್ಯಾನಂದ ಸ್ವಾಮಿ ಜತೆ ಇರುವುದಾಗಿ ಮಾಧ್ಯಮದ ಮುಂದೆ ಶಾಕಿಂಗ್ ಹೇಳಿಕೆ ನೀಡಿ ಭಾವುಕರಾಗಿದ್ದಾರೆ.
ನನ್ನ ಮೂರು ಹೆಣ್ಣು ಮಕ್ಕಳಿಗೆ ಅವರಿಷ್ಟಪಟ್ಟವರೊಂದಿಗೆ ಮದುವೆ ಮಾಡಿಸಿ ಕೊಟ್ಟಿದ್ದೇನೆ . ಮೊದಲನೇಯವಳು ಅಮೇರಿಕಾದಲ್ಲಿದ್ದು, ಆಗಾಗ ನಿತ್ಯಾನಂದ ಸ್ವಾಮಿ ಪ್ರವಚನ ಕೇಳಲು ಹೋಗುತ್ತಿದ್ದಳು. ಅಕ್ಕನನ್ನು ನೋಡಲು ಹೋದ ನನ್ನ ಎರಡನೇ ಮಗಳು ನಿತ್ಯಾನಂದ ಪ್ರವಚನ ಕೇಳಲು ಹೋಗ ತೊಡಗಿದ್ದು, ಈಗ ನಿತ್ಯಾನಂದನೊಂದಿಗೆ ಇದ್ದಾಳೆಂದು ತಿಳಿದಿದೆ. ಅವಳ ಮತ್ತು ನಿತ್ಯಾನಂದನ ಸಂಬಂಧದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಕೆಲವೊಂದು ಫೋಟೋಗಳು ಬೇರೆಯೇ ಕಥೆ ಹೇಳುತ್ತಿದೆ. ಇಬ್ಬರು ಮಕ್ಕಳು ಗಂಡಂದಿರಿಗೆ ಡೈವೋರ್ಸ್ ನೀಡಿ ನಿತ್ಯಾನಂದ ಆಶ್ರಮ ಸೇರಿದ್ದಾರೆ. ಈಗಲೂ ಇಲ್ಲಿಯೇ ಇರುವುದಾಗಿ ಹೇಳಿ ಅಶೋಕ್ ಕಣ್ಣೀರಿಟ್ಟಿದ್ದಾರೆ. ಒಂದೂ ಕರೆಯನ್ನು ಮಾಡದ ಸಹೋದರಿಯರ ಬಗ್ಗೆ ಅಶೋಕ್ ಗೆ ಯಾವುದೇ ಮಾಹಿತಿ ತಿಳಿದಿಲ್ಲ. ಮಕ್ಕಳ ಕೊರಗಿನಿಂದ ಅಶೋಕ್ ಪತ್ನಿ ಸಾವನ್ನಪ್ಪಿದ್ದು, ಮೂರನೇ ಮಗಳು ಈಗ ತಂದೆಯನ್ನು ನೋಡಿಕೊಳ್ಳುತ್ತಿದ್ದಾರೆ. ನಿತ್ಯಾನಂದ ಎಂಬ ಕಪಟ ಸ್ವಾಮಿಯ ತೆಕ್ಕೆಗೆ ಬಿದ್ದಿರುವ ತನ್ನಿಬ್ಬರೂ ಮಕ್ಕಳಿಗಾಗಿ ಈ ಇಳಿ ವಯಸ್ಸಿನಲ್ಲೂ ಅಶೋಕ್ ಕಣ್ಣೀರು ಬತ್ತಿಲ್ಲವಾದರೂ ನಿತ್ಯಾನಂದನ ಕೈಯಿಂದ ಅವರನ್ನು ಬಿಡಿಸಿ ತರುವ ಪ್ರಶ್ನೆಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ.