ಮಂಗಳೂರು : ಹಲವು ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ನಡೆಸಿ ಅಮಾನತಾಗಿದ್ದ ಸಾರಿಗೆ ರಾಜ್ಯ ಸಾರಿಗೆ ನಿಗಮದ ನೌಕರರ ಮರು ನೇಮಕದ ಬಗ್ಗೆ ನೀಡಲಾದ ಮನವಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ವಜಾಗೊಳಿಸಿರುವ ಬಗ್ಗೆ ತನಿಖೆ ನಡೆಸಿ ಜೂನ್ 11ರ ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ವಜಾಗೊಂಡ ನೌಕರರ ಮರುನೇಮಕವಾದಲ್ಲಿ ಇನ್ನೊಂದು ಬಗೆಯ ಸಂಕಷ್ಟ ಸರಕಾರಕ್ಕೆ ಎದುರಾಗಲಿದೆ. ವಜಾಗೊಂಡವರ ಸ್ಥಾನದಲ್ಲಿ ಇತರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು ಮರುನೇಮಕದಿಂದ ಗೊಂದಲ ಉಂಟಾಗಲಿದೆ. ಒಂದು ವೇಳೆ ಮರುನೇಮಕವಾದರೆ ಸರಕಾರಕ್ಕೆ ಮತ್ತಷ್ಟು ಸಂಬಳದ ಹೊರ ಬೀಳಲಿದೆ ಎನ್ನಲಾಗಿದೆ.