ಮಂಗಳೂರು: ಮಧ್ಯಪ್ರದೇಶದಲ್ಲಿ ಕುತೂಹಲಕಾರಿ ಚುನಾವಣಾ ಪೂರ್ವ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಹಿಂದುತ್ವ ಮತ್ತು ಗೋ ಸಂರಕ್ಷಣೆಗಾಗಿ ಅರ್ಪಿಸಿಕೊಂಡಿರುವ ಬಲಪಂಥೀಯ ಸಂಘಟನೆ ಭಜರಂಗ ಸೇನಾ ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಂಡಿದೆ.
ಕಾಂಗ್ರೆಸ್ ನ ರಾಜ್ಯ ಕೇಂದ್ರ ಕಚೇರಿಯಲ್ಲಿ ನಡೆದ ವಿಲೀನ ಕಾರ್ಯಕ್ರಮದಲ್ಲಿ ಬಜರಂಗ ಸೇನಾದ ರಾಷ್ಟ್ರೀಯ ಅಧ್ಯಕ್ಷ ರಣವೀರ್ ಪಟೇರಿಯಾ ಕಾಂಗ್ರೆಸ್ ನ ಸಿದ್ದಾಂತ ಮತ್ತು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ನಾಥ್ ಅವರ ವಿಚಾರಗಳನ್ನು ನಾವು ಹೃತ್ಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಮೋಸ, ವಿಶ್ವಾಸ ಘಾತ ಮತ್ತು ವಂಚನೆಗೆ ಇನ್ನೊಂದು ಹೆಸರಾಗಿರುವ ಬಿಜೆಪಿ ಸರ್ಕಾರವನ್ನು ಪದಚ್ಯುತಿಗೊಳಿಸಲು ಮತ್ತು ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರಲು ನಾವು ಬದ್ಧರಾಗಿದ್ದೇವೆ ಎಂದು ಪಟೇರಿಯಾ ಹೇಳಿದ್ದಾರೆ.
ಬಲಪಂಥೀಯ ಸಂಘಟನೆಯ ವಿಲೀನದೊಂದಿಗೆ ಸಿದ್ಧಾಂತಗಳ ಸಂಘರ್ಷ ಉಂಟಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಕೆ ಕೆ ಮಿಶ್ರಾ ಅವರೆಲ್ಲ ಈಗ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ, ಹೀಗಾಗಿ ಯಾವುದೇ ಸಂಘರ್ಷವಿರುವುದಿಲ್ಲ ಎಂದು ಹೇಳಿದ್ದಾರೆ.