ಒಡಿಶಾ ರೈಲು ಅಪಘಾತ – ಮೃತ ದೇಹಗಳನ್ನಿಟ್ಟಿದ್ದ ಶಾಲೆ ನೆಲಸಮ

ಮಂಗಳೂರು: (ಒಡಿಶಾ) ಜೂ.2ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಮೃತಪಟ್ಟವರ ಶವಗಳನ್ನು ಇಡಲು ತಾತ್ಕಾಲಿಕ ಶವಾಗಾರವಾಗಿ ಬಳಸಲಾಗಿದ್ದ 65 ವರ್ಷ ಹಳೆಯದಾದ ಬಹನಾಗ ಹೈಸ್ಕೂಲ್ ಕಟ್ಟಡವನ್ನು ಕೆಡವಲು ಒಡಿಶಾ ಸರ್ಕಾರ ತೀರ್ಮಾನಿಸಿದೆ.

ಶಾಲಾ ವ್ಯವಸ್ಥಾಪಕ ಸಮಿತಿ ಸದಸ್ಯರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯವನ್ನು ಆರಂಭಿಸಲಾಗಿದೆ.

ಕಟ್ಟಡವು ಹಳೆಯದಾಗಿದ್ದು, ಸುರಕ್ಷಿತವಲ್ಲ. ಅಲ್ಲದೇ ಶವಗಳನ್ನು ಇರಿಸಲಾಗಿರುವ ಶಾಲೆಯಲ್ಲಿ ತರಗತಿಗಳಿಗೆ ಹಾಜರಾಗಲು ಮಕ್ಕಳು ಹಿಂಜರಿಯುತ್ತಿದ್ದಾರೆ ಎಂದು ಎಸ್ಎಂಸಿ ಹೇಳಿದ ನಂತರ ಕಟ್ಟಡವನ್ನು ನೆಲಸಮಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here