ಆನ್ಲೈನ್ ಡಿಜಿಟಲ್ ಮಾರುಕಟ್ಟೆ ಆರಂಭಿಸಿದ ಕೇಂದ್ರ ಸರಕಾರ

ಮಂಗಳೂರು: ಆನ್ಲೈನ್ ಶಾಪಿಂಗ್ ಪ್ರಿಯರಿಗೆ ಕೇಂದ್ರ ಸರಕಾರ ಗುಡ್ ನ್ಯೂಸ್ ನೀಡಿದೆ. ಓಏನ್ ಡಿಸಿ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಎಂಬ ಈ ಕಾಮರ್ಸ್ ವೇದಿಕೆಯನ್ನು ಕೇಂದ್ರ ಸರ್ಕಾರ ಹುಟ್ಟು ಹಾಕಿದೆ.

ಸಣ್ಣ ವ್ಯಾಪಾರಿಗಳು ಹಾಗೂ ಗ್ರಾಹಕರನ್ನು ಉತ್ತೇಜಿಸುವುದು ಇದರ ಗುರಿ ಎಂದು ಕೇಂದ್ರ ಹೇಳಿದೆ. ಓಎನ್‌ ಡಿಸಿ ಮಾರುಕಟ್ಟೆ ಜಾಲವಾಗಿದ್ದು ಉತ್ಪನ್ನಗಳು ಸ್ಪರ್ಧಾತ್ಮಕ ಮೊತ್ತದಲ್ಲಿ ಗ್ರಾಹಕರ ಕೈ ಸೇರಲಿದೆ. ಇದು ವ್ಯಾಪಾರಿ ಹಾಗೂ ಗ್ರಾಹಕರ ಮಧ್ಯವರ್ತಿಯಾಗಿ ಕೆಲಸ ಮಾಡಲಿದೆ. ವ್ಯಾಪಾರ ಹಣ ಪಾವತಿ ಆರ್ಡರ್ ತಲುಪುವವರೆಗೂ ಮೇಲ್ವಿಚಾರಣೆ ಹೊಂದಿದೆ. ಬೆಂಗಳೂರಿನಲ್ಲಿ ಓಎನ್‌ಟಿಸಿ ಆರಂಭಗೊಂಡಿದ್ದು, ಸದ್ಯ ಗ್ರಾಹಕರು ದಿನಸಿ ಮತ್ತು ರೆಸ್ಟೋರೆಂಟ್ ವಿಭಾಗದಲ್ಲಿ ಖರೀದಿ ಮಾಡಬಹುದು. 20 ಸಂಸ್ಥೆಗಳು ಓಎನ್‌ಡಿಸಿಯಲ್ಲಿ ಸುಮಾರು 255 ಕೋಟಿ ರೂಪಾಯಿ ಬಂಡವಾಳ ಹೂಡಿದ್ದು, ದೇಶದ ಪ್ರಮುಖ ಬ್ಯಾಂಕುಗಳು ಬಂಡವಾಳ ಹೂಡಲು ಆಸಕ್ತಿ ತೋರಿದೆ.

LEAVE A REPLY

Please enter your comment!
Please enter your name here