ಮಂಗಳೂರು – ಡ್ರಗ್ಸ್ ಮಾರಾಟ – ಇಬ್ಬರ ಬಂಧನ

ಮಂಗಳೂರು : ಉಳ್ಳಾಲ ನೆತ್ತಿಲಪದವು ಎಂಬಲ್ಲಿ ಅಕ್ರಮವಾಗಿ ಮೆಥಾಂಪೆಟಾಮೈನ್ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು ರೂ.1 ಲಕ್ಷಕ್ಕೂ ಅಧಿಕ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ತಲಪಾಡಿ, ಕೆ. ಸಿ ರೋಡ್ ನಿವಾಸಿ ಅಬ್ದುಲ್ ರಶೀದ್(41) ಮತ್ತು ದೇರಳಕಟ್ಟೆಯ ಆರಿಫ್ ಯಾನೆ ಹಾರಿಸ್(40) ಎಂದು ಗುರುತಿಸಲಾಗಿದೆ. ಜೂ.11 ರಂದು ಖಚಿತ ಮಾಹಿತಿ ಮೇರೆಗೆ ಕೊಣಾಜೆ ಠಾಣೆಯ ಪಿಎಸ್ಐ ಅಶೋಕ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here