ಮಂಗಳೂರು: ದಿಲ್ಲಿಯ ಮುಖರ್ಜಿನಗರದಲ್ಲಿ ಗುರುವಾರ ಕೋಚಿಂಗ್ ಸೆಂಟರ್ ಇರುವ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡ ನಂತರ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳು ಕಟ್ಟಡದ ಕಿಟಕಿಯಿಂದ ಹೊರ ಬಂದು ಕೆಳಗೆ ಜಿಗಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
ವಯರ್ ಹಾಗೂ ಹಗ್ಗಗಳನ್ನು ಬಳಸಿ ಕಟ್ಟಡದಿಂದ ಕೆಳಗೆ ಇಳಿದಿರುವ ಕೆಲವು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಚರಣೆ ನಡೆಸಿ ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯುತ್ ಮೀಟರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಉಪಕರಣಗಳಲ್ಲಿ ಹೊರಹೊಮ್ಮಿದ ಹೊಗೆಯಿಂದಾಗಿ ವಿದ್ಯಾರ್ಥಿಗಳು ಗಾಬರಿಗೊಂಡು ಕೋಚಿಂಗ್ ಸೆಂಟರ್ ನ ಹಿಂಭಾಗದ ಕಿಟಕಿಯಿಂದ ಹೊರಬಂದು ಕೆಳಗೆ ಇಳಿಯಲು ಮುಂದಾದರು ಎಂದು ಪೊಲೀಸರು ಹೇಳಿದ್ದಾರೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
#Watch | A fire broke out at a coaching institute in northwest Delhi’s Mukherjee Nagar area on Thursday. Videos from the scene showed students escaping by climbing down the side of the building using ropes and wires.
Read: https://t.co/zAcamz0nJz pic.twitter.com/ymfwnyZdth
— The Indian Express (@IndianExpress) June 15, 2023