ಯುವಕರನ್ನು ಭಯೋತ್ಪಾದನೆಗೆ ತಳ್ಳುತ್ತಿದ್ದ ಪಿಎಫ್ಐ ಮುಖಂಡನ ಬಂಧನ

ಮಂಗಳೂರು: ಯುವಕರ ಬ್ರೈನ್ ವಾಶ್ ಮಾಡಿ ಭಯೋತ್ಪಾದನೆಗೆ ತಳ್ಳುತ್ತಿದ್ದ ನಿಷೇಧಿತ ಸಂಘಟನೆ ಪಿಎಫ್ಐ ಮುಖಂಡನನ್ನು ರಾಷ್ಟ್ರೀಯ ತನಿಕದಳದ ಅಧಿಕಾರಿಗಳು ಬಳ್ಳಾರಿಯ ಕೌಲ್ ಬಜಾರ್ ನಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿ ಆಂಧ್ರ ಮೂಲದ ಮಹಮ್ಮದ್ ಯೂನಸ್ (33) ಎಂದು ತಿಳಿದುಬಂದಿದೆ. ಕಳೆದ 4 ತಿಂಗಳಿಂದ ಈತ ಪ್ಲಂಬರ್ ಆಗಿ ಕೆಲಸ ಮಾಡಿಕೊಂಡು ಬಳ್ಳಾರಿಯಲ್ಲಿ ತಲೆಮರಿಸಿಕೊಂಡಿದ್ದ. ನಿಜಾಮಾಬಾದ್ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಈತ ನಿಷೇಧಿತ ಸಂಘಟನೆ ಪಿಎಫ್ಐ ನ ಪ್ರಮುಖ ಶಸ್ತ್ರ ತರಬೇತುದಾರನಾಗಿದ್ದ. ಆಂಧ್ರಪ್ರದೇಶದ ನಂದ್ಯಾಲ್ ಮೂಲದ ಯೂನಸ್ ಸಹೋದರನ ಜೊತೆ ಇನ್ವರ್ಟರ್ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು.

2022ರ ಸೆಪ್ಟೆಂಬರ್ ನಲ್ಲಿ ತನಿಖಾ ಸಂಸ್ಥೆ ಈತನ ಮನೆಯನ್ನು ಶೋಧಿಸಿದ ಬಳಿಕ ತಲೆಮರೆಸಿಕೊಂಡಿದ್ದಾನೆ. ಗುರುತು ಬದಲಿಸಿ ಬಶೀರ್ ಎಂಬ ಹೆಸರಿನಲ್ಲಿ ಬಳ್ಳಾರಿಯ ಕೌಲ್ ಬಜಾರ್ ನ ಮನೆಯೊಂದರಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ವಾಸಿಸುತ್ತಿದ್ದ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಯುವಕರನ್ನು ಸಂಘಟನೆಗೆ ಸೇರಿಸಿಕೊಂಡು ಭಯೋತ್ಪಾದನಾ ಕೃತ್ಯಗಳನ್ನು ಎಸಗಲು ತರಬೇತಿ ನೀಡುತ್ತಿದ್ದ ಈತ, ಎರಡು ರಾಜ್ಯಗಳಿಗೆ ಪಿಎಫ್ಐ ನ ದೈಹಿಕ ತರಬೇತಿ ರಾಜ್ಯ ಸಂಯೋಜಕನಾಗಿದ್ದ ಎಂದು ಎನ್ಐಎ ಮೂಲಗಳು ತಿಳಿಸಿದೆ.

LEAVE A REPLY

Please enter your comment!
Please enter your name here