500 ರೂಪಾಯಿ ಮುಖಬೆಲೆಯ ನೋಟುಗಳು ನಾಪತ್ತೆಯಾಗಿಲ್ಲ- ಆರ್ ಬಿ ಐ‌ ಸ್ಪಷ್ಟನೆ

ಮಂಗಳೂರು: 88,032,50 ಕೋಟಿ ಮೌಲ್ಯದ 500 ರೂಪಾಯಿಗಳ ನೋಟುಗಳು ನಾಪತ್ತೆಯಾಗಿವೆ ಎಂದು ಮಾಧ್ಯಮಗಳು ವರದಿ ಬಿತ್ತರಿಸಿದ ಬೆನ್ನಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆಯನ್ನು ನೀಡಿ ಮಾಧ್ಯಮಗಳ ವರದಿಯನ್ನು ನಿರಾಕರಿಸಿದೆ.

2015-16ರ ಅವಧಿಯಲ್ಲಿ ಮುದ್ರಿಸಲಾದ ನೋಟುಗಳ ಪ್ರಮಾಣ ಮತ್ತು ಆರ್‌ಬಿಐಗೆ ಸರಬರಾಜು ಮಾಡಿದ ಮೊತ್ತದ ನಡುವೆ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದಿದೆ. ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿರುವ ವರದಿಗಳು ತಪ್ಪಾಗಿದೆ ಎಂದು ಆರ್‌ಬಿಐ ಹೇಳಿದೆ.

ಆರ್ ಬಿ ಐ ನೀಡಿರುವ ಹೇಳಿಕೆಯ ಪ್ರಕಾರ ನೋಟುಗಳ ಮುದ್ರಣಾಲಯದಿಂದ ಪಡೆದುಕೊಂಡಿರುವ ಮಾಹಿತಿ ಹಕ್ಕು ಕಾಯ್ದೆ 2005ರ ಮೂಲಕ ಪಡೆದ ಮಾಹಿತಿಯಲ್ಲಿನ ತಪ್ಪಾದ ವ್ಯಾಖ್ಯಾನದಿಂದ ಈ ವಿವಾದ ಸೃಷ್ಟಿಯಾಗಿದೆ. ಪ್ರಿಂಟಿಂಗ್ ಪ್ರೆಸ್ ಗಳಿಂದ ಸೆಂಟ್ರಲ್ ಬ್ಯಾಂಕಿಗೆ ಸರಬರಾಜು ಮಾಡಲಾದ ಎಲ್ಲಾ ನೋಟುಗಳು ಸರಿಯಾಗಿ ಲೆಕ್ಕ ಹಾಕಲಾಗಿದೆ ಎಂದು ಆರ್ ಬಿ ಐ ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here