ಮಕ್ಕಳಿಗಾಗಿ ವಿಶೇಷ ಮಾಹಿತಿ
ಭಾರತದ ಬಾವಲಿ (Cynopterus Sphinx)
ಸಣ್ಣ ಮೂಗಿನ ಹಣ್ಣುಬಾಕ ಬಾವಲಿ ಹೆಚ್ಚಾಗಿ ದಕ್ಷಿಣ ಪೂರ್ವ ಏಷ್ಯಾದಲ್ಲಿನ ಪಾಕಿಸ್ತಾನ , ಬಾಂಗ್ಲಾದೇಶ, ಭೂತಾನ್, ಕಾಂಬೋಡಿಯ, ಚೀನಾ, ಭಾರತ , ಶ್ರೀಲಂಕಾ, ಮಾಯನ್ಮಾರ್, ಇಂಡೋನೇಷಿಯಾ , ಲಾವೋಸ್, ಮಲೇಶಿಯಾ, ಥಾಯ್ಲ್ಯಾಂಡ್ ಹಾಗೂ ವಿಯೆಟ್ನಾಮ್ ನ ದಟ್ಟ ಅರಣ್ಯ ಪ್ರದೇಶಗಳಲ್ಲಿ ಸೊಂಪಾಗಿ ಹುಲುಸಾಗಿ, ಹೇರಳವಾಗಿ ಹಣ್ಣುಗಳು ಬೆಳೆದಿರುವ ಪ್ರದೇಶಗಳಲ್ಲಿ, ಕೆಲವೊಮ್ಮೆ ಹುಲ್ಲುಗಾವಲಿನಲ್ಲಿ ಮಾಂಗೃವ್ ಕಾಡುಗಳಲ್ಲಿ ಎತ್ತರದ ತಾಳೆ ಮರಗಳಲ್ಲಿ ಗೂಡನ್ನು ಕಟ್ಟಿ ಎಲೆಗಳನ್ನು ಒಂದರೊಳಗೊಂದು ಹೊಸೆದು ಮಗ್ಗಿ ಹಾಗಿಟೆಂಟ್ ಅಥವಾ ತಾಳೆ ಬಳ್ಳಿಗಳನ್ನು ಬಳಸಿ ಗುಡಿಸಲಿನ ಮಾದರಿ ಮನೆ ಕಟ್ಟುತ್ತದೆ.
ಈ ಬಾವಲಿಗಳು ಉದ್ದ ಮುಸುಡಿ ಹೊಂದಿದ್ದು ದೇಹದ ಮೇಲ್ಭಾಗವು ಕಂದು ಅಥವಾ ಬೂದು ಬಣ್ಣವಿದ್ದು ಕೆಳಭಾಗವು ಮಾಸಿದ ಬಣ್ಣವಿರುವುದು. ದೇಹದ ಮೇಲು ಹೊದಿಕೆಯು ರೇಷ್ಮೆಯಂತೆ ನುಣುಪಾಗಿರುತ್ತದೆ. ಕಿವಿಯ ಮತ್ತು ರೆಕ್ಕೆಗಳ ಮೂಳೆಗಳು ಬಿಳಿಯ ಗುರುತಿನಂತೆ ಎದ್ದು ಕಾಣುತ್ತವೆ. ಈ ಬಾವಲಿಗಳ ರೆಕ್ಕೆಗಳ ಅಳತೆ ಸುಮಾರು 48 ಸೆಂಟಿಮೀಟರ್. ಮರಿಗಳ ತೂಕ ಬಹಳ ಹಗುರ. ಮುಂಗೈ ಅಳತೆ 70.2 ಮಿಲಿ ಮೀಟರ್. ಗಂಡು ಮತ್ತು ಹೆಣ್ಣು ಜೊತೆಯಾಗಿ ವಾಸಿಸುವುದಿಲ್ಲ. ಕೇವಲ ಸಂತಾನೋತ್ಪತ್ತಿಯ ಸಮಯದಲ್ಲಿ ಮಾತ್ರ ಸಮಾಗಮ ಹೊಂದಿ ನಂತರ ತಮ್ಮ ಪ್ರತ್ಯೇಕ ಗುಂಪಿನಲ್ಲಿ ಸೇರ್ಪಡೆ ಹೊಂದುವುದು.
ವರ್ಷಕ್ಕೆರಡು ಬಾರಿ ಸಂತತಿಯನ್ನು ಉತ್ಪತ್ತಿ ಮಾಡುತ್ತದೆ. ಮೂರರಿಂದ ಐದು ತಿಂಗಳಷ್ಟು ಗರ್ಭ ಧರಿಸುತ್ತದೆ. ಒಂದು ಸಲಕ್ಕೆ ಒಂದೇ ಮರಿಯನ್ನು ಹಾಕುತ್ತದೆ. ಹುಟ್ಟಿದಾಗ ಮರಿಗಳು ಕೇವಲ 13.5 ಗ್ರಾಂ ತೂಕ ಹಾಗೂ 24 ಸೆಂಟಿಮೀಟರ್ ರೆಕ್ಕೆಗಳು ಇರುತ್ತದೆ. ಹೆಣ್ಣು ಐದು ಆರು ತಿಂಗಳಲ್ಲಿ ಪ್ರಬುದ್ಧತೆಯನ್ನು ಹೊಂದಿದರೆ ಗಂಡುಮರಿಯೂ ಒಂದು ವರ್ಷದ ನಂತರವೇ ಬಲಿಷ್ಠತೆ ಹೊಂದುತ್ತದೆ. ತಮಗೆ ಬೇಕಾದ ಆಹಾರವನ್ನು ಅವುಗಳ ಸುವಾಸನೆಯಿಂದ ಕಂಡುಹಿಡಿಯುತ್ತದೆ. ಈ ಬಾವಲಿಗಳು ತಮ್ಮ ದೇಹ ಸ್ಥಿತಿಗಿಂತ ಹೆಚ್ಚಿನ ಆಹಾರವನ್ನು ಒಮ್ಮೆಯೇ ಸೇವಿಸುವುದರಿಂದ ಇವುಗಳನ್ನು ಹೊಟ್ಟೆ ಬಾಕ ಬಾವಲಿಗಳೆಂದರೆ ತಪ್ಪಾಗಲಾರದು.