ಆಧಾರ್‌ ಕಾರ್ಡ್ ಪರಿಷ್ಕರಣೆ -‌ ಅವಧಿ ವಿಸ್ತರಣೆ

ಮಂಗಳೂರು: ಹತ್ತು ವರ್ಷಕ್ಕೂ ಹಳೆಯದಾದ ಆಧಾರ್ ಕಾರ್ಡುಗಳನ್ನು ಪರಿಷ್ಕರಣೆ ಅಥವಾ ಅಪ್ಡೇಟ್ ಮಾಡಲು ಕೇಂದ್ರ ಸರಕಾರ ಸೂಚಿಸಿದ್ದು, ಜೂನ್ 14ರ ವರೆಗೆ ಕಾಲಾವಕಾಶ ನೀಡಿತ್ತು. ಇದೀಗ ಗಡುವನ್ನು ಸೆಪ್ಟೆಂಬರ್ 14ರ ವರೆಗೆ ಮುಂದೂಡಿದೆ.

ಹತ್ತು ವರ್ಷಗಳ ಹಿಂದೆ ಆಧಾರ್ ಮಾಡಿಸಿದ್ದವರು, ಈ ಡೆಡ್ ಲೈನ್ ಒಳಗೆ ಆಧಾರ್ ಕಾರ್ಡ್ ನಲ್ಲಿ ನಿಮ್ಮ ವಿಳಾಸ, ಹೆಸರು ಮತ್ತು ಇತರ ಮಾಹಿತಿಗಳನ್ನು ಅಪ್ಡೇಟ್ ಮಾಡುವುದು ಕಡ್ಡಾಯವಾಗಿರುತ್ತದೆ. ಗಡುವು ಮುಗಿದ ಬಳಿಕ ಸರಕಾರ ದಂಡ ವಿಧಿಸುವ ಸಾಧ್ಯತೆಗಳಿವೆ. ಆಧಾರ್ ನ ಅಧಿಕೃತ ವೆಬ್ ಸೈಟ್ ಮೂಲಕ ಉಚಿತವಾಗಿ ಅಪ್ಡೇಟ್ ಮಾಡಲು ಅವಕಾಶವಿದ್ದು, ಎಲ್ಲರೂ ಪರಿಷ್ಕರಣೆ ಮಾಡುವಂತೆ ಕೇಂದ್ರ ಸರಕಾರ ಮನವಿ ಮಾಡಿದೆ.

LEAVE A REPLY

Please enter your comment!
Please enter your name here